ಪುತ್ತೂರಿನಲ್ಲಿ ರೆಡಿಯೋ ಸ್ಟೇಷನ್ ಸ್ಥಾಪನೆಗೆ ಆಗ್ರಹಿಸಿ ಮನವಿ
Update: 2017-11-05 17:24 IST
ಪುತ್ತೂರು, ನ. 5: ಪುತ್ತೂರಿನಲ್ಲಿ ರೆಡಿಯೋ ಸ್ಟೇಷನ್ ಸ್ಥಾಪಿಸಬೇಕೆಂದು ಮತ್ತು ಈಗಿರುವ ದೂರದರ್ಶನ ಕೇಂದ್ರವನ್ನು ಅತ್ಯಾಧುನೀಕರಣಗೊಳಿಸುವಂತೆ ವಿವಿಧ ಸಂಘ ಸಂಸ್ಥೆಗಳಿಂದ ಬಂದ ಮನವಿಯನ್ನು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಸದಸ್ಯ ರಾಜೇಶ್ ಬನ್ನೂರು ಮತ್ತಿತರರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ರವಿವಾರ ಹಸ್ತಾಂತರಿಸಿದರು.
ರೋಟರಿ ಕ್ಲಬ್ ಪುತ್ತೂರು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಒಕ್ಕಲಿಗ ಗೌಡ ಸೇವಾ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರೊಜೆಕ್ಟ್ ಸರ್ವಿಸ್, ಮರಾಠಿ ಸಮಾಜ ಸೇವಾ ಸಂಘಗಳು ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮನವಿ ಸಲ್ಲಿಸಿದ್ದವು.