ಬಂಟ್ವಾಳ: ಗ್ಯಾರೇಜು ಮಾಲಕರಿಗೆ ಗ್ರಾಮೀಣ ಕ್ರೀಡಾಕೂಟ
Update: 2017-11-05 19:26 IST
ಬಂಟ್ವಾಳ, ನ. 5: ದಕ್ಷಿಣ ಕನ್ನಡ ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯದ ಆಶ್ರಯದಲ್ಲಿ ಗ್ಯಾರೇಜು ಮಾಲಕರಿಗೆ ಗ್ರಾಮೀಣ ಕ್ರೀಡಾಕೂಟ ಬಂಟ್ವಾಳದ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ರವಿವಾರ ನಡೆಯಿತು.
ಪ್ರತಿದಿನ ಕೈಯಲ್ಲಿ ಸ್ಪಾನರ್, ಸ್ಕ್ರೂ ಡ್ರೈವರ್ ಹಿಡಿದುಕೊಂಡು ವಾಹನ ರಿಪೇರಿ ಮಾಡುವ ಗ್ಯಾರೇಜು ಸಿಬ್ಬಂದಿ, ತಮ್ಮ ಎಲ್ಲಾ ಕೆಲಸದ ಒತ್ತಡಗಳನ್ನು ಬದಿಗಿರಿಸಿ ಆಟೋಟದಲ್ಲಿ ಸಂಭ್ರಮಿಸಿದರು. ಓಟ, ಮಡಿಕೆ ಒಡೆತ, ಸಂಗೀತ ಕುರ್ಚಿ, ಲಕ್ಕಿಗೇಮ್ ಮೊದಲಾದ ಆಟಗಳನ್ನು ಆಡಿ ಖುಷಿಪಟ್ಟರು.
ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭ ಸಂಘದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್, ಜಗದೀಶ್ ರೈ, ಪ್ರಶಾಂತ್ ಭಂಡಾರ್‌ಕಾರ್, ರಾಜಾ ಬೈಪಾಸ್, ರಮೇಶ್ ಭಂಡಾರಿ, ಸುಧೀರ್ ಬೈಪಾಸ್ ಉಪಸ್ಥಿತರಿದ್ದರು.