ಉಡುಪಿಯಲ್ಲಿ ಕೆಟಿಎಂ ಬೈಕ್ ಸ್ಟಂಟ್ ಪ್ರದರ್ಶನ
Update: 2017-11-05 19:57 IST
ಉಡುಪಿ, ನ.5: ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಆವರಣದಲ್ಲಿ ರವಿವಾರ ಸಂಜೆ ನಡೆದ ಕೆಟಿಎಂ ಬೈಕ್ ಸ್ಟಂಟ್ ಪ್ರದರ್ಶನವು ಅದ್ಭುತವಾಗಿ ಮೂಡಿಬಂತು.
ಬೈಕ್ ಸ್ಟಂಟ್ ಪ್ರದರ್ಶನಕ್ಕೆ ಉಡುಪಿ ಕೆಟಿಎಂನ ಆಡಳಿತ ನಿರ್ದೇಶಕ ವಿಘ್ನೇಶ್ ಕಾಮತ್ ಚಾಲನೆ ನೀಡಿದರು.
ಚೆನ್ನೈಯ ಡಿಎಫ್‌ಜಿ ತಂಡವು ಈ ಪ್ರದರ್ಶನ ವನ್ನು ನಡೆಸಿಕೊಟ್ಟಿತು. ತಂಡದ ಹೆಲ್‌ಬಾಯ್ ಹಾಗೂ ಕ್ಸಾಂಡರ್ ಬೈಕ್ ಸ್ಟಂಟ್ ಅದ್ಭುತ ಸ್ಟಂಟ್‌ಗಳನ್ನು ಮಾಡಿ ನೆರೆದವರನ್ನು ನಿಬ್ಬೆರೆಗೊಳಿಸಿದರು.
ಬೈಕಿನ ಒಂದೇ ಚಕ್ರದಲ್ಲಿ ಸಾಗುವುದು, ಬೈಕ್‌ನ ಮೇಲೆ ನಿಂತು ಸವಾರಿ ಮಾಡುವುದು, ಬೈಕಿನ ಚಕ್ರವನ್ನು ವೇಗದಿಂದ ತಿರುಗಿಸುವುದು ಸೇರಿದಂತೆ ವಿವಿಧ ರೀತಿಯ ಕಸರತ್ತುಗಳು ಗಮನ ಸೆಳೆದವು. ಅಭಿಜಿತ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.