×
Ad

ಅಮೆರಿಕದಲ್ಲಿ ಹಲ್ಲೆಗೊಳಗಾದ ಸಿಖ್ ಬಾಲಕನ ಕುಟುಂಬಕ್ಕೆ ಎಲ್ಲ ನೆರವು: ಸುಷ್ಮಾ ಸ್ವರಾಜ್ ಭರವಸೆ

Update: 2017-11-05 20:10 IST

ಹೊಸದಿಲ್ಲಿ,ನ.5: ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ಹಲ್ಲೆಗೊಳಗಾದ ಸಿಖ್ ಬಾಲಕನ ಕುಟುಂಬಕ್ಕೆ ಎಲ್ಲ ನೆರವು ಒದಗಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರವಿವಾರ ಭರವಸೆ ನೀಡಿದ್ದಾರೆ.

14ರ ಹರೆಯದ ಈ ಬಾಲಕನಿಗೆ ಸಹವಿದ್ಯಾರ್ಥಿ ಹೊಟ್ಟೆಗೆ ಗುದ್ದಿ ಕೆಳಕ್ಕೆ ಕೆಡವಿ ಹಲ್ಲೆ ನಡೆಸಿದ್ದ. ಭಾರತೀಯ ಮೂಲದವನು ಎಂಬ ಕಾರಣಕ್ಕೆ ತನ್ನ ಮಗನನ್ನು ಗುರಿಯಾಗಿಸಿ ಕೊಂಡು ಹಲ್ಲೆ ನಡೆದಿದೆ ಎಂದು ಬಾಲಕನ ತಂದೆ ಆಪಾದಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ನಮ್ಮ ದೂತಾವಾಸವು ವರದಿಯೊಂದನ್ನು ಕಳುಹಿಸಿದೆ. ಅದು ಸಮುದಾಯದ ನಾಯಕರು ಮತ್ತು ಶಾಲೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಕುಟುಂಬದ ಬಯಕೆಯಂತೆ ನಾವು ಎಲ್ಲ ನೆರವು ಒದಗಿಸುತ್ತೇವೆ ಎಂದು ಸ್ವರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News