×
Ad

ನಾವು ಪ್ರಶ್ನಿಸಿದರೆ, ಅವರು ನಮ್ಮನ್ನು ಕೊಲ್ಲುತ್ತಾರೆ: ಕಮಲ್‌ ಹಾಸನ್

Update: 2017-11-05 20:42 IST

ಚೆನ್ನೈ, ನ. 5: ಕಮಲ್ ಹಾಸನ್ ಅವರನ್ನು ಕೊಲ್ಲಬೇಕು ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ನಾಯಕ ನೀಡಿರುವ ಬಹಿರಂಗ ಕರೆಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, ಪ್ರಸಕ್ತ ವ್ಯವಸ್ಥೆ ವಿರುದ್ಧ ಮಾತನಾಡುವವರು ಹತ್ಯೆಗೀಡಾಗುವ ಅಥವಾ ಜೈಲು ಪಾಲಾಗಬೇಕಾದ ಪರಿಸ್ಥಿತಿ ಇದೆ ಎಂದಿದ್ದಾರೆ.

“ನಾವು ಅವರನ್ನು ಪ್ರಶ್ನಿಸಿದರೆ, ಅವರು ನಮ್ಮನ್ನು ದೇಶದ್ರೋಹಿ ಎಂದು ಕರೆಯುತ್ತಾರೆ ಹಾಗೂ ಜೈಲಿಗೆ ಹಾಕುತ್ತಾರೆ. ಈಗ ಜೈಲಿನಲ್ಲಿ ಕೂಡ ಜಾಗ ಇಲ್ಲ. ಆದುದರಿಂದ ನಮ್ಮನ್ನು ಗುಂಡಿಟ್ಟು ಕೊಲ್ಲಲು ಬಯಸುತ್ತಿದ್ದಾರೆ” ಎಂದು ರವಿವಾರ ಇಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಅವರು ಹೇಳಿದರು.

ವಾರಪತ್ರಿಕೆ ವಿಕಡನ್‌ನ ಕಾಲಂನಲ್ಲಿ ಪ್ರಕಟವಾದ ಕಮಲ್ ಹಾಸನ್ ಅವರ ಲೇಖನದ ಹೇಳಿಕೆ ಉಲ್ಲೇಖಿಸಿ ಮಹಾಸಭಾದ ಉಪಾಧ್ಯಕ್ಷ ಅಶೋಕ್ ಶರ್ಮಾ, ಈ ಜನರು ತಮ್ಮ ಕೋಮ ಕಾರ್ಯತಂತ್ರ ಚಾಲ್ತಿಗೆ ತರಲು ಹಿಂದೂ ಧರ್ಮ ಅನುಸರಿಸುವ ವರನ್ನು ಹಿಂದೂ ಭಯೋತ್ಪಾದಕರು ಎಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದ್ದರು.

ಕಮಲ್ ಹಾಸನ್ ಅಂತಹವರನ್ನು ನಿರ್ವಹಿಸಲು ಬೇರೆ ಯಾವುದೇ ದಾರಿ ಇಲ್ಲ. ಅವರನ್ನು ಗಲ್ಲಿಗೇರಿಸಬೇಕು ಅಥವಾ ಗುಂಡಿಟ್ಟು ಕೊಲ್ಲಬೇಕು ಎಂದು ಅವರು ಹೇಳಿದ್ದರು.

 ಮತಾಂಧರನ್ನು ಕೂಡಲೇ ಬಂಧಿಸಿ

ಅಖಿಲ ಭಾರತೀಯ ಹಿಂದೂ ಮಹಾಸಭಾದ ನಾಯಕ ಅಶೋಕ್ ಶರ್ಮಾ ಹೇಳಿಕೆ ಖಂಡಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಂತಹ ಮತಾಂಧರನ್ನು ಕೂಡಲೇ ಬಂಧಿಸಬೇಕು ಎಂದಿದ್ದಾರೆ.

 ಕೊಲ್ಲುವ ಬೆದರಿಕೆ ಒಡ್ಡುವ ಮೂಲಕ ಕಮಲ್ ಹಾಸನ್ ಅವರ ಅಭಿವ್ಯಕ್ತಿ ಸ್ವಾತಂತ್ರ ನಿಯಂತ್ರಿಸುವುದನ್ನು ನಾನು ಖಂಡಿಸುತ್ತೇನೆ. ಹತ್ಯೆಗೆ ಕರೆ ನೀಡುವ ಇಂತಹ ಧಾರ್ಮಿಕ ಮತಾಂಧ ಹಾಗೂ ಮೂಲಭೂತವಾದಿಗಳನ್ನು ಸಂಬಂಧಿತ ಅಧಿಕಾರಿಗಳು ಕೂಡಲೇ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News