×
Ad

ಐಸಿಸ್‌ನ ಶಂಕಿತ ಭಯೋತ್ಪಾದಕ ಬಂಧನ

Update: 2017-11-05 20:57 IST

ಹೊಸದಿಲ್ಲಿ, ನ. 5: ಉತ್ತರಪ್ರದೇಶದ ಎಟಿಎಸ್ ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಐಸಿಸ್‌ನ ಶಂಕಿತ ಭಯೋತ್ಪಾದಕ ಅಬು ಝೈದ್‌ನನ್ನು ಬಂಧಿಸಿದೆ ಎಂದು ಉನ್ನತ ಪೊಲೀಸ್ ಅಧಿಕಾರಿ ರವಿವಾರ ತಿಳಿಸಿದ್ದಾರೆ.

ಝೈದ್ ಸೌದಿ ಅರೇಬಿಯಾದಿಂದ ನಿನ್ನೆ ಇಲ್ಲಿಗೆ ಆಗಮಿಸಿದಾಗ ಬಂಧಿಸಲಾಯಿತು.

ಐಸಿಸ್‌ನ ಶಂಕಿತ ಭಯೋತ್ಪಾದಕ ಅಬು ಝೈದ್ ಸೌದಿ ಅರೇಬಿಯಾದಿಂದ ನಿನ್ನೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಎಟಿಎಸ್ ತಂಡ ಬಂಧಿಸಿದೆ ಎಂದು ಎಡಿಜಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಅನಂದ್ ಕುಮಾರ್ ತಿಳಿಸಿದ್ದಾರೆ.

  ರಿಯಾದ್‌ನಲ್ಲಿ ವಾಸಿಸುತ್ತಿರುವ ಝೈದ್ ಸಾಮಾಜಿಕ ಜಾಲ ತಾಣದಲ್ಲಿ ಗುಂಪೊಂದನ್ನು ಸೃಷ್ಟಿಸಿ ಯುವಕರನ್ನು ಮೂಲಭೂತವಾದಕ್ಕೆ ಪ್ರೇರೇಪಿಸುತ್ತಿದ್ದ ಹಾಗೂ ಅವರನ್ನು ಐಸಿಸ್‌ಗೆ ಆಕರ್ಷಿಸುತ್ತಿದ್ದ ಎಂದು ಅವರು ಹೇಳಿದ್ದಾರೆ.

 ರಿಮಾಂಡ್ ವರ್ಗಾವಣೆಗೆ ಝೈದ್‌ನನ್ನು ಲಕ್ನೊಗೆ ತರಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಎಡಿಜಿಪಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News