×
Ad

ನಕಲಿ ಚಿನ್ನಾಭರಣ ಅಡವಿಟ್ಟು 15.54ಲಕ್ಷ ರೂ. ವಂಚನೆ: ಗ್ರಾಹಕರೊಂದಿಗೆ ಅಧಿಕಾರಿಗಳು ಶಾಮೀಲು; ದೂರು

Update: 2017-11-05 22:39 IST

ಕುಂದಾಪುರ, ನ.5: ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಕಂಪೆನಿಯ ಕುಂದಾಪುರ ಶಾಖೆಯ ಅಧಿಕಾರಿಗಳು ಐವರು ಗ್ರಾಹಕರೊಂದಿಗೆ ಸೇರಿ ಬೇರೆ ಬೇರೆ ಸಾಲದ ಖಾತೆಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಒಟ್ಟು ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಹೊಸ ಬಸ್ ನಿಲ್ದಾಣದ ಬಳಿ ಇರುವ ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಕಂಪನಿಯ ಕುಂದಾಪುರ ಶಾಖೆಯಲ್ಲಿ ಜೂ.29ರಿಂದ ಸೆ.16ರ ಮಧ್ಯಾವಧಿಯಲ್ಲಿ ಸಂಕೇತ ವಿಜಯ ಶೆಟ್ಟಿ ಎಂಬವರ ಹೆಸರಿನಲ್ಲಿ ಒಟ್ಟು 6 ಸಾಲದ ಖಾತೆ, ಸುಧೀರ್ ಎನ್. ಎಂಬವರ 4 ಖಾತೆ, ಗೌರೀಶ್ ವಿಷ್ಣು ಆಚಾರಿಯ 3 ಸಾಲದ ಖಾತೆ, ಮೋಹನ್ ಖಾರ್ವಿಯ 2 ಸಾಲದ ಖಾತೆ, ಶ್ರೀಧರ ಶೆಟ್ಟಿ ಎಂಬವರ ಒಂದು ಸಾಲದ ಖಾತೆಗಳಲ್ಲಿ ಚಿನ್ನಾಭರಣಗಳನ್ನು ಅಡವು ಇರಿಸಿದ್ದು, ಸೆ.16ರಂದು ನಿರೀಕ್ಷಕ ಶೀತಲ್ ಮೋನ್ ವಿ.ಎಂ. ಈ ಚಿನ್ನಾಭರಣಗಳ ಪರಿವೀಕ್ಷಣೆಯನ್ನು ಮಾಡಿದಾಗ ಇವುಗಳು ನಕಲಿಯಾಗಿ ರುವುದೆಂದು ತಿಳಿದುಬಂದಿದೆ.

ಈ ಗ್ರಾಹಕರೊಂದಿಗೆ ಶಾಖೆಯ ಮೇನೆಜರ್ ರಾಘವೇಂದ್ರ, ಜಾಯಿಂಟ್ ಕಸ್ಟೋಡಿಯನ್ ಸುನೀಲ್ ಶೆಟ್ಟಿ, ಕಸ್ಟಮರ್ ಸರ್ವಿಸ್ ಎಕ್ಸ್‌ಕ್ಯೂಟಿವ್ ಸುರೇಶ್ ಮತ್ತು ಕ್ಯಾಷಿಯರ್ ದೇವೇಂದ್ರ ನಾಯ್ಕ್ ಸೇರಿಕೊಂಡು ಕಂಪನಿಯ ನಿಯಮ ಗಳನ್ನು ಉಲ್ಲಂಘಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಂಪನಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಅ.31ರವರೆಗೆ ಅಸಲು 14,93,720ರೂ., ಬಡ್ಡಿ 60,380ರೂ. ಸೇರಿದಂತೆ ಒಟ್ಟು 15,54,100ರೂ. ವಂಚಿಸಿ ಮೋಸ ಮಾಡಿರುವುದಾಗಿ ಕಂಪೆನಿಯ ಉಡುಪಿ ಜಿಲ್ಲೆ ಏರಿಯಾ ಮೇನೆಜರ್ ಉಮೇಶ ಜಿ.ಎಂ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News