‘ಎಲ್ಜಿ ಸಿಗ್ನೇಚರ್’ ಶ್ರೇಣಿ ನ. 6ರಂದು ಅನಾವರಣ
ಮಂಗಳೂರು, ನ. 5: ವಿಶ್ವದ ಪ್ರಸಿದ್ಧ ಇಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ಉತ್ಪನ್ನಗಳ ತಯಾರಕರಾದ ಎಲ್ಜಿ ಕಂಪೆನಿಯ ನೂತನ ವಿಶೇಷ ಅತ್ಯುತ್ಕೃಷ್ಟ ಮಟ್ಟದ ‘ಎಲ್ಜಿ-ಸಿಗ್ನೇಚರ್’ ಶ್ರೇಣಿಯ ಗೃಹೋಪಯೋಗಿ ಉತ್ಪನ್ನಗಳನ್ನು ಪ್ರಥಮ ಬಾರಿಗೆ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಎಲ್ಜಿ ಬೆಸ್ಟ್‌ಶಾಪ್‌ನಲ್ಲಿ ನ. 6ರಂದು ಸಂಜೆ 5 ಗಂಟೆಗೆ ಅನಾವರಣಗೊಳ್ಳಲಿದೆ.
6,17,900 ರೂ. ಬೆಲೆಬಾಳುವ ಎಲ್ಜಿ ಸಿಗ್ನೇಚರ್ ರೆಫ್ರಿಜರೇಟರ್, ರೂ.3,40,000 ಬೆಲೆಬಾಳುವ ವಾಷಿಂಗ್ ಮಿಷಿನ್, 9,13,900 ಬೆಲೆಬಾಳುವ 65 ಓಎಲ್ಇಡಿ ಈ ಶ್ರೇಣಿಯಲ್ಲಿ ಲಭ್ಯವಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಬಶೀರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಎ.ಕೆ.ಗ್ರೂಪ್‌ನ ಅಹ್ಮದ್ ಎ.ಕೆ., ಯೆನೆಪೋಯ ಗ್ರೂಪ್‌ನ ಫರ್ಹಾದ್ ಯೆನೆಪೋಯ, ಲ್ಯಾಂಡ್ ಮಾರ್ಕ್ ಇನ್ಫ್ರಾಟೆಕ್‌ನ ಜಿ.ಶಬೀರ್, ‘ವಾರ್ತಾಭಾರತಿ’ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಯು.ಟಿ.ಇಫ್ತಿಕಾರ್, ಎಚ್.ಎಚ್. ಆ್ಯಂಡ್ ಕೊ. ಇದರ ಅಮೀನ್, ಗ್ರೂಪ್ ಡೆಲ್ಟಾದ ಮೊಯ್ದಿನ್, ಇಂಟೀರಿಯರ್ ಡಿಸೈನರ್ ಸುಜಯ್ ಲೋಬೋ, ಗ್ರೂಪ್4ನ ಮುಹಮ್ಮದ್ ಬಾವಾ ಎಲ್ಜಿ ಮಂಗಳೂರು ವಿಭಾಗದ ಶಾಖಾಧ್ಯಕ್ಷ ಸಯ್ಯಿದ್ ಜಾಫರ್ , ವಲಯ ಮಾರಾಟ ವ್ಯವಸ್ಥಾಪಕ ಹರೀಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಮಂಗಳೂರು ಡಿಜಿವೇಲ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಖಾದರ್ ಬಸ್ಸಾಂ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.