×
Ad

ಪೊಲಿಪು: ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2017-11-06 16:35 IST

ಕಾಪು, ನ.6: ಕಾಪು ಖುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ 27ನೆ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಸಮಾ ರಂಭವನ್ನು ರವಿವಾರ ಪೊಲಿಪು ಜುಮಾ ಮಸೀದಿಯ ಆವರಣದಲ್ಲಿ ಆಯೋಜಿಸಲಾಗಿತ್ತು.

ನಿಖಾಃ ನೇತೃತ್ವ ವಹಿಸಿ ಧಾರ್ಮಿಕ ಪ್ರವಚನ ನೀಡಿದ ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ನಿಖಾ ಮತ್ತು ತಲಾಕ್‌ಗೆ ನಿಯ್ಯತ್ ಇರುವುದಿಲ್ಲ. ಸೃಷ್ಟಿಕರ್ತನ ತೀರ್ಮಾನವೇ ಅಂತಿಮ ಎಂಬುದನ್ನು ನಾವೆಲ್ಲರು ತಿಳಿದುಕೊಳ್ಳಬೇಕು. ಯುವ ಸಮುದಾಯದ ಧರ್ಮದ ಬೋಧನೆ ಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾಪು ಉಸ್ತಾದ್ ಪಿ.ಬಿ.ಅಹಮದ್ ಮುಸ್ಲಿಯಾರ್ ದುವಾ ನೆರವೇರಿಸಿ ದರು. ಕಾರ್ಯಕ್ರಮವನ್ನು ಮಸೀದಿಯ ಖತೀಬ್ ಇರ್ಷಾದ್ ಸಅದಿ ಉದ್ಘಾಟಿಸಿದರು.

ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜಿ.ಎ.ಬಾವ, ನವೀನ್‌ಚಂದ್ರ ಶೆಟ್ಟಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಪುರಸಭಾ ಉಪಾಧ್ಯಕ್ಷ ಉಸ್ಮಾನ್ ಸಾಹೇಬ್, ಸದಸ್ಯರಾದ ಇಮ್ರಾನ್ ಮಜೂರು, ಅಮೀರ್ ಮುಹಮ್ಮದ್, ಸೂಪರ್‌ಸ್ಟಾರ್ ಅಬ್ದುಲ್ಲಾ, ಮಸೀದಿ ಅಧ್ಯಕ್ಷ ಹಾಜಿ ಕೆ.ಆಜಬ್ಬ, ಮಾಜಿ ಖತೀಬ್ ಬದ್ರುದ್ದೀನ್ ಅಹ್‌ಸನಿ, ಸದರ್ ಮುಅಲ್ಲಿಂ ಅಬ್ದುರ್ರಝಾಕ್ ಅಲ್‌ಖಾಸಿಮಿ, ಇಬ್ರಾಹಿಂ ತೌಸೀಫ್, ಮಜೀದ್ ಹನೀಫಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಧುವರರಿಗೆ ಚಿನ್ನಾಭರಣ, ವಾಚ್  ಉಡುಗೊರೆಯಾಗಿ ನೀಡಲಾಯಿತು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಬಶೀರ್ ಜನಪ್ರಿಯ ವಹಿಸಿ ದ್ದರು. ಶಬ್ಬೀರ್ ಮುಹಮ್ಮದ್ ಸ್ವಾಗತಿಸಿದರು. ಕಾರ್ಯದರ್ಶಿ ಅಕ್ರಂ ಗುಡ್‌ವಿಲ್, ಉಪಾಧ್ಯಕ್ಷ ಆರೀಫ್ ಕಲ್ಯಾ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News