×
Ad

ಕನಕ ಸದ್ಬಾವನಾ ಜ್ಯೋತಿ ರಥಯಾತ್ರೆ: ಕುಂಭ ಕಳಸ ಮೆರವಣಿಗೆ

Update: 2017-11-06 16:38 IST

ಉಡುಪಿ, ನ.6: ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ, ಪರ್ಯಾಯ ಪೇಜಾವರ ಮಠ ಶ್ರೀಕೃಷ್ಣ ಮಠ ಹಾಗೂ ಕನಕ ಸದ್ಬಾವನಾ ಜ್ಯೋತಿ ರಥಯಾತ್ರೆ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜಗದ್ಗುರು ಕನಕ ದಾಸರ 530ನೆ ಜಯಂತೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕನಕ ಸದ್ಬಾವನಾ ಜ್ಯೋತಿ ರಥಯಾತ್ರೆಯು ಸೋಮವಾರ ಉಡುಪಿಗೆ ಆಗಮಿಸಿತು.

ಜೋಡುಕಟ್ಟೆಯಿಂದ ಆರಂಭಗೊಂಡ ಭವ್ಯ ಕುಂಭ ಕಳಸ ಮೆರವಣಿಗೆಗೆ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಚಾಲನೆ ನೀಡಿದರು. ಬಳಿಕ ಮೆರವಣಿಗೆಯು ನಗರದ ಪ್ರಮುಖ ಬೀದಿಯಲ್ಲಿ ಸಾಗಿ ರಥಬೀದಿಗೆ ಆಗಮಿ ಸಿತು. ರಥಬೀದಿಯ ಕನಕ ಗೋಪುರದ ಎದುರಿನ ಕನಕದಾಸರ ಮೂರ್ತಿಗೆ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದರು.

ಬಳಿಕ ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪೇಜಾವರ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಬಿ.ಶಿವ ರಾವು ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು.

ರಥಯಾತ್ರೆ ಸಮಿತಿಯ ರಾಜ್ಯಾದ್ಯಕ್ಷ ಓಂ ಕೃಷ್ಣಮೂರ್ತಿ, ಪ್ರಧಾನ ಕಾರ್ಯ ದರ್ಶಿ ಪ್ರಭಾವತಿ, ಸಾಹಿತಿ, ಚೊಕ್ಕನ ಹಳ್ಳಿ ಮಹೇಶ್, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ನಗರಸಭೆ ಸದಸ್ಯ ಯುವರಾಜ್, ಹಾಲುಮತ ಯುವ ವೇದಿಕೆಯ ಗೌರವಾಧ್ಯಕ್ಷ ಸಿದ್ಧ ರಾಜು ಕೆ.ಎಸ್., ಸಮಾಜ ಸೇವಕ ನಿತ್ಯಾನಂದ ಒಳಕಾಡು, ವಿಜಯ ಕುಮಾರ್ ಹಾಸಂಗಿ ಉಪಸ್ಥಿತರಿದ್ದರು.

ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಸ್ವಾಗತಿಸಿದರು. ಅಧ್ಯಕ್ಷ ಹನುಮಂತ ಡೊಳ್ಳಿನ ವಂದಿಸಿದರು. ಬೀರಪ್ಪ ಹುನಿ ಚಾಳ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News