×
Ad

ಕೊಡಂಗೆಯಲ್ಲಿ ಉಚಿತ ಹಿಜಾಮ ಚಿಕಿತ್ಸಾ ಶಿಬಿರ

Update: 2017-11-06 18:59 IST

ಬಂಟ್ವಾಳ, ನ. 6: ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಹಾಗೂ ಯು.ಟಿ.ಖಾದರ್ ಅಭಿಮಾನಿಗಳ ಬಳಗ ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆ ಇದರ ಸಹಯೋಗದೊಂದಿಗೆ ಉಚಿತ ಹಿಜಾಮ ಚಿಕಿತ್ಸಾ ಶಿಬಿರ ಬಿ.ಸಿ.ರೋಡಿನ ಕೊಡಂಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಹಾರ ಸಚಿವ ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿಜಾಮ ಚಿಕಿತ್ಸೆಯನ್ನು ಜನರಿಗೆ ಪರಿಚಯಿಸುವಲ್ಲಿ ಜವಾನ್ ಫ್ರೆಂಡ್ಸ್ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಮಿತ್ತಬೈಲು ಜುಮಾ ಮಸೀದಿ ಖತೀಬ್ ಎಂ.ವೈ.ಅಶ್ರಫ್ ಫೈಝಿ ದುವಾ ನೆರವೇರಿಸಿದರು. ವೆನ್ಲಾಕ್ ಜಿಲ್ಲಾಸ್ಪತ್ರೆಯ ಯುನಾನಿ ವೈದ್ಯ ಡಾ. ಸಯ್ಯದ್ ಝಾಹಿದ್ ಹುಸೈನ್ ಮತ್ತು ಡಾ.ನೂರುಲ್ಲಾ ಹಿಜಾಮ ಕ್ಯಾಂಪ್ ನಡೆಸಿಕೊಟ್ಟರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ. ಮಹಮ್ಮದಾಲಿ ಕಮ್ಮರಡಿ, ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅರಫಾ ಜುಮಾ ಮಸೀದಿ ಖತೀಬ್ ಮುಹ್ಸಿನ್ ಫೈಝಿ, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರಾ, ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯ ಶರೀಫ್ ಶಾಂತಿಅಂಗಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಖ್ ಪುದು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶಿರ್ ಪೇರಿಮಾರ್, ಮಿತ್ತಬೈಲು ಜುಮಾ ಮಸೀದಿ ಸದಸ್ಯ ಅಹ್ಮದ್ ಕುಂಞ್ಞೆ ನಂದರಬೆಟ್ಟು, ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಪರ್ಲಿಯಾ ಅರಫಾ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಸಾಗರ್, ಪರ್ಲಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಹಮದ್ ಬಾವ ಕಡ್ಪಿಕರಿಯ, ಮಿತ್ತಬೈಲು ಜುಮಾ ಮಸೀದಿ ಉಪಾಧ್ಯಕ್ಷ ಇಬ್ರಾಹಿಂ ಬೋಗೋಡಿ, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ದಕ ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಳ, ನೂರಾನಿಯಾ ಎಸೋಸಿಯೇಶನ್ ಅಧ್ಯಕ್ಷ ಇಕ್ಬಾಲ್ ಎ.ಕೆ., ಅಕ್ಷರ ಪತ್ರಿಕೆ ಸಂಪಾದಕ ಇಸ್ಮಾಯಿಲ್ ಬಿ.ಎಸ್., ಕೊಡಂಗೆ ಶಾಲಾ ಮುಖ್ಯಶಿಕ್ಷಕ ಭಾಸ್ಕರ್, ಶಿಕ್ಷಣ ಇಲಾಖೆಯ ರಾಜೇಶ್ ಸುವರ್ಣ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಇಬ್ರಾಹಿಂ ಕೊಡಂಗೆ, ಸೈಫುಲ್ಲಾ ಪರ್ಲಿಯಾ, ಹುಸೈನ್ ರಿಯಾರ್, ಕೊಡಂಗೆ ಶಾಲಾ ಎಸ್.ಡಿ.ಎಂ.ಸಿ ಸದಸ್ಯರಾದ ಹನೀಫ್, ಇಬ್ರಾಹಿಂ, ಅಯ್ಯೂಬ್, ಖಾದರ್ ನಂದರಬೆಟ್ಟು, ನೌಷಾದ್ ನಂದರಬೆಟ್ಟು ಯಾಸಿರ್ ಬಂಟ್ವಾಳ, ನೌಫಲ್ ಬಂಟ್ವಾಳ, ಯು.ಟಿ.ಖಾದರ್ ಅಭಿಮಾನಿ ಬಳಗದ ಇಸ್ಮಾಯಿಲ್ ಪಡ್ಪಿನಂಗಡಿ, ಅಬೂಬಕರ್ ಅನಿಲಕಟ್ಟೆ, ಸಿರಾಜ್ ಮದಕ, ನವಾರ್ ಕೈಕಂಬ, ಆಸಿಫ್ ವಿಟ್ಲ, ಫೌಸಿಲ್ ನೆಕ್ಕರೆ, ರಿಯಾರ್ ಬೊಳ್ಳಾಯಿ, ಮುಹಮ್ಮದ್ ಅಲಿ ಜೌಹರ್ ಕುಕ್ಕಾಜೆ, ಇಸ್ಮಾಯಿಲ್ ಕೋಲ್ಪೆ, ಜವಾನ್ ಫ್ರೆಂಡ್ಸ್ ಅಧ್ಯಕ್ಷ ರಿಯಾರ್ ಜವಾನ್, ಸದಸ್ಯರಾದ ಸತ್ತಾರ್ ನಂದರಬೆಟ್ಟು, ನಝೀರ್ ಪರ್ಲಿಯಾ, ನೌಶಾದ್ ವಗ್ಗ ಮತ್ತು ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗಝಾಲಿ ನಿರೂಪಿಸಿದರು ತನ್ಸೀಫ್ ಬಿ.ಎಂ. ಸ್ವಾಗತಿಸಿ ರೆಹಮಾನ್ ಖಾನ್ ಕುಂಜತ್ತಬೈಲ್ ವಂದಿಸಿದರು. ಕ್ಯಾಂಪ್‌ನಲ್ಲಿ ಸುಮಾರು 98 ಜನರು ಹಿಜಾಮ ಚಿಕಿತ್ಸೆಯನ್ನು ಪಡೆದರು.

ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ಆಪ್ತಸಹಾಯಕ ಮುಹಮ್ಮದ್ ಲಿಬ್‌ಝತ್, ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆಯ ಅಧ್ಯಕ್ಷ ಬಿ.ಎಂ. ಇಸ್ಮಾಯಿಲ್ ಮತ್ತು ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರನ್ನು ಸಚಿವ ರಮಾನಾಥ ರೈ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News