ನೋಟು ರದ್ಧತಿ ಪರಿಣಾಮದಿಂದ ಕಷ್ಟದಲ್ಲಿದ್ದೇನೆ: ಸಚಿವ ಪ್ರಮೋದ್
Update: 2017-11-06 19:29 IST
ಉಡುಪಿ, ನ.6: ನೋಟು ರದ್ಧತಿಯ ಪರಿಣಾಮ ನನಗೂ ಆಗಿದೆ. ನಾನು ಕೂಡ ಕಷ್ಟದಲ್ಲಿದ್ದೇನೆ. ಈಗ ಜನರೇ ಹೇಳುತ್ತಿದ್ದಾರೆ ಪ್ರಮೋದ್ ಡೋನೆಶನ್ ಕೊಡುವುದನ್ನು ಕಡಿಮೆ ಮಾಡಿದ್ದಾರೆಂದು. ಇದೆಲ್ಲವೂ ನೋಟು ರದ್ಧತಿಯ ಪರಿಣಾಮ. ನನ್ನ ಹಾಗೆ ಎಲ್ಲರೂ ಈಗ ಕಷ್ಟದಲ್ಲಿದ್ದಾರೆ ಎಂದು ರಾಜ್ಯ ಮೀನು ಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟು ರದ್ದು ಆದ ಸಂದರ್ಭದಲ್ಲಿ ಇದರ ಪರಿಣಾಮ ತಿಳಿಯಲು ಸ್ವಲ್ಪ ಸಮಯ ಕಾಯಬೇಕು ಮತ್ತು ಇದರಿಂದ ಮುಂದೆ ಜನರ ಆದಾಯ ಕಡಿತ ಆಗುತ್ತದೆ ಎಂಬುದಾಗಿ ನಾನು ಹೇಳಿದ್ದೆ. ಈಗ ಅಮಿತ್ ಶಾ ಪುತ್ರ ಜಯ್ ಶಾ ಒಬ್ಬರ ಆದಾಯ ಬಿಟ್ಟರೆ ಮತ್ತೆ ಯಾರ ಆದಾಯವೂ ಕೂಡ ಏರಿಕೆಯಾಗಿಲ್ಲ. ತಿಂಗಳ ಸಂಬಳ ಪಡೆಯುವವರನ್ನು ಬಿಟ್ಟರೆ ಪ್ರತಿದಿನ ಕೂಲಿ ಮಾಡುವವರು ಹಾಗೂ ವ್ಯಾಪಾರ ಮಾಡುವವರಿಗೆ ಇದರಿಂದ ಸಾಕಷ್ಟು ತೊಂದರೆಯಾಗಿದೆ ಎಂದು ತಿಳಿಸಿದರು.