×
Ad

ನೂತನ ‘ಎಲ್ಜಿ ಸಿಗ್ನೇಚರ್’ ಶ್ರೇಣಿ ಅನಾವರಣ

Update: 2017-11-06 19:56 IST

ಮಂಗಳೂರು, ನ. 6: ವಿಶ್ವದ ಪ್ರಸಿದ್ಧ ಇಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ಉತ್ಪನ್ನಗಳ ತಯಾರಕರಾದ ಎಲ್ಜಿ ಕಂಪೆನಿಯ ನೂತನ ವಿಶೇಷ ಉತ್ಕೃಷ್ಟ ಮಟ್ಟದ ‘ಎಲ್ಜಿ-ಸಿಗ್ನೇಚರ್’ ಶ್ರೇಣಿಯ ಗೃಹೋಪಯೋಗಿ ಉತ್ಪನ್ನಗಳ ಮಳಿಗೆ ನಗರದ ಕೆ.ಎಸ್.ರಾವ್ ರಸ್ತೆಯ ಎಲ್ಜಿ ಬೆಸ್ಟ್‌ಶಾಪ್‌ನಲ್ಲಿ ಸೋಮವಾರ ಅನಾವರಣಗೊಂಡಿತು.

ಈ ವಿಶೇಷ ‘ಎಲ್ಜಿ-ಸಿಗ್ನೇಚರ್’ ಶ್ರೇಣಿಯ ಉತ್ಪನ್ನಗಳು ಮಂಗಳೂರಿಗೆ ಪ್ರಥಮ ಬಾರಿಗೆ ಪರಿಚಯಿಸಿದೆ. ಎ.ಕೆ.ಗ್ರೂಪ್‌ನ ಅಹ್ಮದ್ ಎ.ಕೆ. ಅವರು ರಿಬ್ಬನ್ ಕತ್ತರಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ಯು.ಟಿ.ಇಫ್ತಿಕಾರ್ ಅವರು ನೂತನ ಉತ್ಪನ್ನಗಳನ್ನು ಅನಾವರಣಗೊಳಿಸಿದರು. ಲ್ಯಾಂಡ್ ಮಾರ್ಕ್ ಇನ್ಫ್ರಾಟೆಕ್‌ನ ಜಿ.ಶಬೀರ್, ‘ವಾರ್ತಾಭಾರತಿ’ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಎಚ್.ಎಚ್. ಆ್ಯಂಡ್ ಕೊ. ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಮುಹಮ್ಮದ್ ಅಮೀನ್, ಗ್ರೂಪ್ ಡೆಲ್ಟಾದ ವ್ಯವಸ್ಥಾಪಕ ನಿರ್ದೇಶಕ ಮೊಯ್ದಿನ್,
'ಗ್ರೂಪ್4" ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಬಾವ, ಇಂಟೀರಿಯರ್ ಡಿಸೈನರ್ ಸುಜಯ್ ಲೋಬೋ ಮೊದಲಾದವರು ಶುಭ ಹಾರೈಸಿ ಮಾತನಾಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಎಲ್ಜಿ ಮಂಗಳೂರು ವಿಭಾಗದ ಶಾಖಾಧ್ಯಕ್ಷ ಸಯ್ಯಿದ್ ಜಾಫರ್, ವಲಯ ಮಾರಾಟ ವ್ಯವಸ್ಥಾಪಕ ಹರೀಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮ್ಯಾಂಗಲೋರ್ ಡಿಜಿವೇಲ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಬಸ್ಸಾಂ ಎ.ಕೆ. ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

6,17,900 ರೂ. ಬೆಲೆಬಾಳುವ ಎಲ್ಜಿ ಸಿಗ್ನೇಚರ್ ರೆಫ್ರಿಜರೇಟರ್, 3,40,000 ರೂ. ಬೆಲೆಬಾಳುವ ವಾಷಿಂಗ್ ಮಿಷಿನ್, 9,13,900 ರೂ. ಬೆಲೆಬಾಳುವ 65 ಒಎಲ್ಇಡಿ ಈ ಶ್ರೇಣಿಯಲ್ಲಿ ನೂತನ ಮಳಿಗೆಯಲ್ಲಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News