ಚಾಲಕ ಆತ್ಮಹತ್ಯೆ
Update: 2017-11-06 22:28 IST
ಅಮಾಸೆಬೈಲು, ನ.6: ಹೊಸಂಗಡಿ ಕೆಪಿಸಿ ಕಾಲನಿಯಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.6ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕೆಪಿಸಿ ಕಾಲನಿಯ ಶಾರದಮ್ಮ ಎಂಬವರ ಮಗ ಶಶಿಕುಮಾರ (35) ಎಂದು ಗುರುತಿಸಲಾಗಿದೆ. ಚಾಲಕ ಕೆಲಸ ಮಾಡಿಕೊಂಡಿದ್ದ ಶಶಿ ಕುಮಾರ್ ಮನೆಯಲ್ಲಿ ಯಾರು ಇಲ್ಲದಾಗ ಬಚ್ಚಲು ಕೋಣೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.