×
Ad

ಯುವಕನ ಸಂಶಯಾಸ್ಪದ ಮೃತ್ಯು: ದೂರು

Update: 2017-11-06 22:30 IST

ಗಂಗೊಳ್ಳಿ, ನ.6: ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯಲ್ಲಿ ಬೋಟ್ ಯಾರ್ಡ್ ಒಳಗೆ ಕಟ್ಟಡದ ಕಂಬಕ್ಕೆ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಪಟ್ಟಿದ್ದು, ಈ ಮರಣದ ಬಗ್ಗೆ ಮೃತರ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ.

ಮೃತರನ್ನು ಕುಂಬಾಶಿಯ ಕೊರವಾಡಿ ನಿವಾಸಿ ಉಮೇಶ(32) ಎಂದು ಗುರುತಿಸಲಾಗಿದೆ. ಗಣೇಶ್ ಮೊಗವೀರ ಎಂಬವರ ಬೋಟ್‌ನಲ್ಲಿ ಚಾಲಕ ನಾಗಿ ಕೆಲಸ ಮಾಡಿಕೊಂಡಿದ್ದ ಉಮೇಶ್, ನ.5ರಂದು ಬೆಳಗಿನ ಜಾವ ಮನೆಯಿಂದ ಗಂಗೊಳ್ಳಿಗೆ ಬೋಟ್ ಕೆಲಸಕ್ಕೆ ಹೋಗಿದ್ದನು.

ನ. 6ರಂದು ಬೆಳಗ್ಗೆ 7:30ರ ಸುಮಾರಿಗೆ ಉಮೇಶ್ ಬೋಟ್‌ನ ಯಾರ್ಡ್ ಒಳಗೆ ಕಟ್ಟಡದ ಕಂಬಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಉಮೇಶ್‌ರ ಮರಣದಲ್ಲಿ ಸಹೋದರ ಸುಭಾಷ್ ಮೊಗವೀರ ಸಂಶಯ ವ್ಯಕ್ತಪಡಿಸಿ ನೀಡಿರುವ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News