×
Ad

ತೊಕ್ಕೋಟ್ಟು: ತಾಜುಲ್ ಉಲಮಾ ಅನುಸ್ಮರಣೆ

Update: 2017-11-06 22:49 IST

ತೊಕ್ಕೋಟ್ಟು, ನ. 6: ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಸಾಕಾಣಿಕೆಗಾಗಿ ಬಡ ಕುಟುಂಬಗಳಿಗೆ ಆಡು ವಿತರಣೆ ಕಾರ್ಯಕ್ರಮ ಕುಂಪಲದ ಸ್ಟೂಡೆಂಟ್ಸ್ ಹೌಸ್‍ನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಉದ್ಘಾಟಿಸಿದರು. ರಿಲೀಫ್ ಸಮಿತಿ ಅಧ್ಯಕ್ಷ ಅಲ್ತಾಫ್ ಕುಂಪಲ ಅಧ್ಯಕ್ಷತೆ ವಹಿಸಿದರು. ಸೆಕ್ಟರ್ ಕಾರ್ಯದರ್ಶಿ ಮನ್ಸೂರ್ ಚೆಂಬುಗುಡ್ಡೆ ಧ್ವಜಾರೋಹಣ ನಡೆಸಿದರು. ಮಾಧ್ಯಮ ಕಾರ್ಯದರ್ಶಿ ಬಿ.ಎಸ್. ಇಸ್ಮಾಈಲ್ ಪ್ರಾಸ್ತಾವಿಕ ಮಾತನಾಡಿದರು.

ಸೆಕ್ಟರ್ ಉಪಾಧ್ಯಕ್ಷ ಶಮೀರ್ ಸೇವಂತಿಗುಡ್ಡೆ, ಇಮ್ರಾನ್ ಸ್ವಲಾತ್ ನಗರ, ಕಾರ್ಯದರ್ಶಿ ಶಮೀರ್ ಮದನಿನಗರ, ಕೋಶಾಧಿಕಾರಿ ಜುನೈದ್ ಮದನಿ ನಗರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ ಸ್ವಾಗತಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News