ಉಡುಪಿ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾಗಿ ಖತೀಬ್ ರಶೀದ್
ಉಡುಪಿ, ನ.7: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ 2017- 19ನೆ ಸಾಲಿನ ನೂತನ ಅಧ್ಯಕ್ಷರಾಗಿ ಖತೀಬ್ ಅಬ್ದುಲ್ ರಶೀದ್ ಆಯ್ಕೆಯಾಗಿದ್ದಾರೆ.
ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್‌ನಲ್ಲಿ ಇತ್ತೀಚೆಗೆ ಶಭಿ ಅಹಮದ್ ಕಾಝಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್ಲಾ ಪರ್ಕಳ, ಸಲಾಹುದ್ದೀನ್ ಸಾಹೇಬ್, ಕಾರ್ಯದರ್ಶಿಯಾಗಿ ಕಾಸಿಮ್ ಬಾರಕೂರು, ಜೊತೆ ಕಾರ್ಯ ದರ್ಶಿಯಾಗಿ ಶೇಕ್ ಮುಶೀರ್ ಅಹಮದ್, ಕೋಶಾಧಿಕಾರಿಯಾಗಿ ಮುಹಮ್ಮದ್ ಸಮೀರ್, ಸಂಘಟನಾ ಕಾರ್ಯದರ್ಶಿಯಾಗಿ ನಾಸೀರ್ ಯಾಕೂಬ್, ಪತ್ರಿಕಾ ಕಾರ್ಯದರ್ಶಿಯಾಗಿ ಅನ್ವರ್ ಅಲಿ ಕಾಪು ಆಯ್ಕೆಯಾದರು.
ಸದಸ್ಯರುಗಳಾಗಿ ಇಬ್ರಾಹಿಂ ಸಾಹೇಬ್ ಕೋಟ, ವೈ.ಜಿ.ರಸೂಲ್, ಎನ್. ಎಂ.ಶಮೀಮ್, ಮುಹಮ್ಮದ್ ಹುಸೇನ್, ಹಸೇನಾರ್ ಅಬ್ದುಲ್ಲಾ, ಮುಹ ಮ್ಮದ್ ಬಾರಕೂರು, ಹಸನ್ ಅಜ್ಜರಕಾಡು, ಆಸೀಫ್ ಬೈಕಾಡಿ, ಕೆ.ಪಿ. ಇಬ್ರಾಹಿಂ, ವಿ.ಎಸ್.ಉಮರ್, ಬಶೀರ್ ಕೋಟ, ಶಭಿ ಅಹ್ಮದ್ ಕಾಝಿ, ಬಶೀರ್ ಅಹಮದ್, ಇಕ್ಬಾಲ್ ಕುಂಜಾಲು ಅವರನ್ನು ಆರಿಸಲಾಯಿತು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಮುಹಮ್ಮದ್ ಸಮೀರ್ ವಾಚಿಸಿ ದರು. ಕೋಶಾಧಿಕಾರಿ ಕಾಸಿಮ್ ಬಾರಕೂರು ಲೆಕ್ಕಪತ್ರ ಮಂಡಿಸಿದರು. ವೀಕ್ಷಕ ರಾಗಿ ಕುಂದಾಪುರದ ಹಾಜಿ ಅಬ್ದುಲ್ಲಾ ಸಾಹೇಬ್, ಕಾರ್ಕಳದ ಸೈಯ್ಯದ್ ಅಬ್ಬಾಸ್, ಪ್ರಧಾನ ಕಚೇರಿ ಮಂಗಳೂರಿನ ವ್ಯವಸ್ಥಾಪಕ ಆದಂ ಬ್ಯಾರಿ ಆಗಮಿ ಸಿದ್ದರು. ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.