ಆನ್‌ಲೈನ್ ಮೂಲಕ ಡ್ರಗ್ ಖರೀದಿ: ಇಬ್ಬರ ಬಂಧನ

Update: 2017-11-07 15:03 GMT

ಹೊಸದಿಲ್ಲಿ, ನ. 7: ಡಾರ್ಕ್‌ವೆಬ್ ಆಧರಿಸಿದ ಅಂತಾ ರಾಷ್ಟ್ರೀಯ ಮಾದಕ ದ್ರವ್ಯ ಜಾಲದಿಂದ ಮಾದಕ ದ್ರವ್ಯ ಖರೀದಿಸಿ ಗುಪ್ತ ಕರೆನ್ಸಿ ಹಾಗೂ ಅನಿಯಂತ್ರಿತ ಬಿಟ್ ಕಾಯಿನ್ ಮೂಲಕ ಪಾವತಿ ಮಾಡಿ ಬಳಿಕ ರೇವ್ ಪಾರ್ಟಿಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

 ಶಂಕಿತರು ಟೋರ್ ಹಾಗೂ 12ಪಿಯಂತಹ ಜಾಲತಾಣದ ಮೂಲಕ ಡಾರ್ಕ್‌ವೆಬ್‌ನ ಸಂಪರ್ಕ ಪಡೆಯುತ್ತಿದ್ದರು. ನಿಯಂತ್ರಣ ತಂಡ ಸಂಪರ್ಕಿಸಲು ಗೂಢ ಲಿಪಿಯ ಸಾಫ್ಟ್ ವೇರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದರು. ಅನಂತರ ಬಿಟ್ ಕಾಯಿನ್ ಹಾಗೂ ಗುಪ್ತ ಕರೆನ್ಸಿ ನೀಡಿ ಮಾದಕ ದ್ರವ್ಯ ಖರೀದಿಸುತ್ತಿದ್ದರು.

ಅಕ್ಟೋಬರ್ 29ರಂದು ದಿಲ್ಲಿ ಮೂಲದ ಡಿಜೆ ಕಮಲ್ ಕಾಲ್ರಾನನ್ನು 100 ಮಾದಕದ್ರವ್ಯದ ಮಾತ್ರೆಗಳೊಂದಿಗೆ ಬಂಧಿಸಿದ್ದರು. ಆತ ನೀಡಿದ ಮಾಹಿತಿಯಂತೆ ಕಾರ್ಯಪ್ರವೃತ್ತರಾದ ಪೊಲೀಸರು ರೇವ್ ಪಾರ್ಟಿಗಳಿಗೆ ತಂಡವೊಂದು ಮಾದಕ ದ್ರವ್ಯ ಪೂರೈಕೆ ಮಾಡುವುದನ್ನು ಕಂಡುಕೊಂಡಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ (ಅಪರಾಧ) ರಾಜೇಶ್ ದಿಯೋ ಹೇಳಿದ್ದಾರೆ.

ಕಾಲ್ರಾನ ಸೆಲ್‌ಫೋನ್ ಕರೆ ವಿವರ ಪರಿಶೀಲಿಸಿ ಮಹೇಶ್ ಗೋಯಲ್‌ನನ್ನು ಬಂಧಿಸಲಾಯಿತು. ನೈರುತ್ಯ ದಿಲ್ಲಿಯ ದ್ವಾರ್ಕಾದಿಂದ 20 ಗ್ರಾಂ ಮಾದಕ ದ್ರವ್ಯದೊಂದಿಗೆ ಈತನನ್ನು ಬಂಧಿಸಲಾಯಿತು ಎಂದು ದಿಯೋ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News