ಅಗತ್ಯ ಬಿದ್ದರೆ ಸರ್ವ ಸೇನಾ ಶಕ್ತಿ ಬಳಸಲು ಸಿದ್ಧ: ಉತ್ತರ ಕೊರಿಯಕ್ಕೆ ಟ್ರಂಪ್ ಎಚ್ಚರಿಕೆ

Update: 2017-11-07 16:10 GMT

ಸಿಯೋಲ್, ನ. 7: ತನ್ನನ್ನು ಮತ್ತು ತನ್ನ ಮಿತ್ರ ದೇಶಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಾದರೆ ಸಂಪೂರ್ಣ ಸೇನಾ ಶಕ್ತಿಯನ್ನು ಬಳಸಲು ಅಮೆರಿಕ ತಯಾರಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

 ತನ್ನ ಎರಡು ವಾರಗಳ ಏಶ್ಯ ಪ್ರವಾಸದ ಭಾಗವಾಗಿ ದಕ್ಷಿಣ ಕೊರಿಯದಲ್ಲಿರುವ ಟ್ರಂಪ್ ಉತ್ತರ ಕೊರಿಯಕ್ಕೆ ಈ ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಸೇನಾ ಶಕ್ತಿಯನ್ನು ಹೊರತುಪಡಿಸಿದ ಎಲ್ಲ ಸಲಕರಣೆಗಳನ್ನು ಬಳಸಲು ತಾನು ಇಚ್ಛಿಸುತ್ತೇನೆ ಎಂದು ಹೇಳಿದರು.

ಆದರೆ, ಅನಗತ್ಯವಾಗಿ ಜನರನ್ನು ಬೆದರಿಸುವುದರಿಂದ ಉತ್ತರ ಕೊರಿಯದ ಸರ್ವಾಧಿಕಾರಿಯನ್ನು ತಡೆಯಲು ಏನೆಲ್ಲ ಅಗತ್ಯವಿದೆಯೋ ಅವುಗಳನ್ನು ಮಾಡಲು ತಾನು ಸಿದ್ಧನಾಗಿದ್ದೇನೆ ಎಂದರು.

‘‘ನಾವು ಏನೆಲ್ಲ ನಿರ್ಮಿಸಿದ್ದೇವೆಯೋ ಅವುಗಳೆಲ್ಲವನ್ನೂ ಬೆದರಿಸಲು ಉತ್ತರ ಕೊರಿಯಕ್ಕೆ ನಾವು ಅವಕಾಶ ನೀಡಲಾಗದು’’ ಎಂದು ತನ್ನ ಎರಡು ದಿನಗಳ ದಕ್ಷಿಣ ಕೊರಿಯ ಪ್ರವಾಸದ ಮೊದಲ ದಿನದಂದು ಅಮೆರಿಕದ ಅಧ್ಯಕ್ಷ ಹೇಳಿದರು.

‘‘ಅಮೆರಿಕ ತನ್ನ ಸಂಪೂರ್ಣ ಸೇನಾ ಸಾಮರ್ಥ್ಯವನ್ನು ಬಳಸುವ ಪರಿಸ್ಥಿತಿ ಬರಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News