23.22 ಲಕ್ಷ ಶಂಕಿತ ಬ್ಯಾಂಕ್ ಖಾತೆ ಪರಿಶೀಲನೆಯಲ್ಲಿ: ನಿತಿನ್ ಗಡ್ಕರಿ

Update: 2017-11-08 14:39 GMT

ಮುಂಬೈ, ನ. 8: ನೋಟ್ ಬ್ಯಾನ್ ಬಳಿಕ 23.22 ಲಕ್ಷ ಬ್ಯಾಂಕ್ ಖಾತೆಗಳಲ್ಲಿ 3.68 ಲಕ್ಷ ಕೋಟಿ ರೂ. ಠೇವಣಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕೇಂದ್ರ ನೌಕಾ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ.

ಇದಲ್ಲದೆ ವ್ಯಕ್ತಿಯ ಆದಾಯ ತೆರಿಗೆ ವಿವರಗಳಿಗೆ ಹೋಲಿಕೆಯಾಗದ ನಗದು ವರ್ಗಾವಣೆಯ ಸುಮಾರು 17.73 ಲಕ್ಷ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.ನಂ. 1 ಆರ್ಥಿಕತೆ (ಬಿಳಿ) ಹಾಗೂ ನಂ. 2 (ಕಪ್ಪು) ಆರ್ಥಿಕತೆ ನಾಶವಾಗಲಾರದು. ನಾವು ಡಿಜಿಟಲ್ ಹಾಗೂ ನಗದು ರಹಿತ ಆರ್ಥಿಕತೆಯತ್ತ ಚಲಿಸುತ್ತಿದ್ದೇವೆ ಎಂದು ಗಡ್ಕರಿ ಹೇಳಿದರು.

ನಗದು ನಿಷೇಧ ವರ್ಷಾಚರಣೆಯ ದಿನವಾದ ಗುರುವಾರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ಜನರು ತರಕಾರಿ ಅಥವಾ ದವಸಧಾನ್ಯ ಖರೀದಿಯಲ್ಲಿ ಕೂಡ ಡಿಜಿಟಲ್ ಪೇಮೆಂಟ್ ಮಾಡುತ್ತಿದ್ದಾರೆ. ಟೋಲ್ ಪ್ಲಾಜಾ ಕೂಡ ನಗದು ರಹಿತತೆ ಕಡೆ ಹೆಜ್ಜೆ ಹಾಕುತ್ತಿದೆ. ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News