×
Ad

ವಿಟಿಯು ಅಥ್ಲೆಟಿಕ್ಸ್ ಮೀಟ್: ಅಂಜುಮನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

Update: 2017-11-08 20:40 IST

ಭಟ್ಕಳ, ನ. 8:  ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಜರಗಿದ ಅಥ್ಲೆಟಿಕ್ ಮೀಟ್ ನಲ್ಲಿ ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೊಲಜಿ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದು ಹರ್ಡಲ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ನೋವಿಲ್ ಫಿಲಿಫ್ಸ್ 110 ಮೀ.ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಬಾಚಿಕೊಂಡಿದ್ದಾರೆ. ಹ್ಯಾಮರ್ ಎಸೆತದಲ್ಲಿ ಅಬ್ದುಲ್ ಕಾದಿರ್ ತಲಾಲ್ ಮತ್ತು ಟ್ರಿಪಲ್ ಜಂಪ್ ನಲ್ಲಿ ಸಖಲೈನ್ ಶೇಖ್ ಬ್ರೌನ್ಸ್ ಮೆಡಲ್ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮ್ ಜುಕಾಕೋ, ಪ್ರಾಂಶುಪಾಲ ಡಾ. ಮುಷ್ತಾಖ್ ಭಾವಿಕಟ್ಟೆ ಸೇರಿದಂತೆ ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News