ಭಟ್ಕಳ ಅಂಜುಮನ್ ಇಂಜಿನಿಯರಿಂಗ್ ಕಾಲೇಜ್: ಪಿಯು ವಿದ್ಯಾರ್ಥಿಗಳಿಗೆ ಫೆಸ್ಟ್
ಭಟ್ಕಳ, ನ. 8: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೊಲಜಿ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯ ಭಟ್ಕಳ ತಾಲೂಕಿನ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನ.11ರಂದು ಒಂದು ದಿನದ ಫೆಸ್ಟ್ ಆಯೋಜಿಸಿದೆ ಎಂದು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಮುಷ್ತಾಖ್ ಭಾವಿಕಟ್ಟಿ ತಿಳಿಸಿದ್ದಾರೆ.
ಅವರು ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು ಮಿನಿ ಸ್ಟೆಮ್ ಫೆಷ್ಟ್-2017 (Mini STEM Fest-2017) ಎಂಬ ಶಿರ್ಷಿಕೆಯಡಿ ಈ ಫೆಷ್ಟದ ಆಯೋಜಿಸಿದ್ದು ಮಾಡಲ್ ಎಕ್ಸ್ಪೋಮತ್ತು ಕ್ವಿಝೊಮಾನಿಯಾಎಂಬ ಎರಡು ಪ್ರಮುಖ ಕಾರ್ಯಕ್ರಮ ನಡೆಯಲಿದೆ. ಮಾಡಲ್ಸ್ ಎಕ್ಸ್ಪೋ ದಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶವಿದ್ದು ಫಿಸಿಕ್ಸ್, ಕೆಮೆಷ್ಟ್ರಿ, ಗಣಿತ,ವಿಜ್ಞಾನ ಮತ್ತು ಇಂಜಿನಿಯರಿಂಗ್ ಗೆ ಸಂಬಂಧಿಸಿದ ಮಾದರಿಗಳನ್ನು ಸಿದ್ದಗೊಳಿಸಿದ ಪ್ರದರ್ಶನ ಮಾಡಬಹುದಾಗಿದೆ. ಕ್ವಿಝೋಮಾನಿಯಗುಂಪಿನಲ್ಲಿ ರಸಪ್ರಶ್ನೆಗಳನ್ನು ಸ್ಪರ್ಧೆ ನಡೆಲಾಗುವುದು.
ಭಟ್ಕಳ ತಾಲೂಕಿನ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಅವರು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಎಚ್.ಎಂ.ಫಾಲಚಂದ್ರ, ಪ್ರೋ.ಭಾಗವತ್ ಉಪಸ್ಥಿತರಿದ್ದರು.