ನೋಟು ನಿಷೇಧದಿಂದ ಕಾಶ್ಮೀರದಲ್ಲಿ ಕಲ್ಲೆಸೆತದ ಘಟನೆ ಇಳಿಕೆ: ಸುರೇಶ್ ಪ್ರಭು
Update: 2017-11-08 21:19 IST
ಹೊಸದಿಲ್ಲಿ, ನ.8: ನೋಟು ನಿಷೇಧದಿಂದ ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನೆ ಹಾಗೂ ಕಲ್ಲೆಸೆಯುವ ಘಟನೆಗಳು ಕಡಿಮೆಯಾಗಿವೆ. ದೇಶದ ವಿವಿಧ ಭಾಗಗಳಲ್ಲಿ ನಕ್ಸಲ್ ಚಟುವಟಿಕೆಗಳು ಇಳಿಕೆಯಾಗಿವೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಸುರೇಶ್ ಪ್ರಭು ಹೇಳಿದರು.
ಅಕ್ರಮ ಸಂಪತ್ತಿನ ವಿರುದ್ಧ ಸರಕಾರದ ನಿರ್ಣಾಯಕ ಕ್ರಮ ಇದಾಗಿದೆ. ಈ ಚಾರಿತ್ರಿಕ ಕ್ರಮ ಸಕಾರತ್ಮಾಕ ಫಲಿತಾಂಶ ನೀಡಿದೆ. ಅಲ್ಲದೆ ಇದು ಕಪ್ಪುಹಣ ನಿರ್ಮೂಲನಕ್ಕೆ ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.
ಜೈಪುರದಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ದೇಶ ಡಿಜಿಟಲ್ ಆರ್ಥಿಕತೆಯತ್ತ ಸಾಗುತ್ತಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಭು, ಕಪ್ಪು ಹಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ನಗದು ನಿಷೇಧ ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಹಾಗೂ ನಗದಿನಿಂದ ಡಿಜಿಟಲ್ ಆರ್ಥಿಕತೆಯತ್ತ ಪ್ರಗತಿಯಾಗು ತ್ತಿರುವ ಆರ್ಥಿಕತೆಗೆ ಉಪಯೋಗವಾಗಲಿದೆ ಎಂದು ಅವರು ಹೇಳಿದರು.