×
Ad

​10ರಂದು ‘ನುಗ್ಗೇಕಾಯಿ’ ಚಲನಚಿತ್ರ ಬಿಡುಗಡೆ

Update: 2017-11-08 21:27 IST

ಮಂಗಳೂರು, ನ. 8: ಚಲನಚಿತ್ರಗಳ ನಿರ್ದೇಶಕ ಎ.ಗೋಣುಗೋಪಾಲ್ ಅವರ ನಿರ್ದೇಶನದ ‘ನುಗ್ಗೇಕಾಯಿ’ ಕನ್ನಡ ಚಲನಚಿತ್ರವು ನ.10ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಎ.ಗೋಣುಗೋಪಾಲ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನುಗ್ಗೇಕಾಯಿ’ ಚಲನಚಿತ್ರದಲ್ಲಿ ಶೇ. 95ರಷ್ಟು ಮಂದಿ ಮಂಗಳೂರಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಚಿತ್ರದ ಚಿತ್ರೀಕರಣವೂ ಮಂಗಳೂರಿನ ಕೆಲವೆಡೆಗಳಲ್ಲಿ ನಡೆದಿದೆ ಎಂದರು.

ನಾಯಕ ನಟಿ ಎಸ್ತರ್ ನೊರೊನ್ಹಾ ಮಾತನಾಡಿ, ಸುಮಾರು 12 ಚಿತ್ರಗಳಲ್ಲಿ ನಟಿಸಿರುವ ಅನುಭವಗಳಿದ್ದು, ಗೋಣುಗೋಪಾಲ್ ಅವರ ನಿರ್ದೇಶನದ ಚಿತ್ರದಲ್ಲಿ ಪ್ರಥಮವಾಗಿ ನಟಿಸುತ್ತಿದ್ದೇನೆ ಎಂದರು.

ನಾಯಕ ನಟ ಮಧುಸೂದನ್ ವಿಜಯ್ ಕುಮಾರ್ ಮಾತನಾಡಿ, ‘ನುಗ್ಗೇಕಾಯಿ’ ತನ್ನ ಪ್ರಥಮ ಚಿತ್ರವಾಗಿದ್ದು, ಚಿತ್ರೀಕಣದ ಉದ್ದಕ್ಕೂ ನಿರ್ದೇಶಕರು ಸಹಕಾರ ನೀಡಿದ್ದಾರೆ ಎಂದರು.

ಚಿತ್ರದ ಖಳನಾಯಕ ವರ್ಧನ್ ಪೈ ಮಾತನಾಡಿ, ‘ನುಗ್ಗೇಕಾಯಿ’ ಪ್ರಥಮವಾಗಿದ್ದರೂ ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ನಿರ್ದೇಶಕ ಗೋಣುಗೋಪಾಲ್ ಅವರ ನಿರ್ದೇಶನದ ಚಿತ್ರ ಉತ್ತಮ ಪ್ರದರ್ಶನ ಕಾಣಬಹುದೆಂಬ ನಿರೀಕ್ಷೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News