×
Ad

ಆಧಾರ್ ಒಂದು ಆತುರದ ನಿರ್ಧಾರ: ಸಂಸದ ರಾಜೀವ್ ಚಂದ್ರಶೇಖರ್

Update: 2017-11-08 21:37 IST

ಹೊಸದಿಲ್ಲಿ, ನ.8: ಆಧಾರ್ ದೇಶದ ಜನರ ಮೇಲೆ ಹೇರಲಾದ ಆತುರದ ನಿರ್ಧಾರವಾಗಿದೆ ಅದಕ್ಕೆ ಪೂರಕವಾದ ಪರಿಸ್ಥಿತಿಯನ್ನು ನಿರ್ಮಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಡಿಜಿಟಲ್ ಪ್ರಜೆಗಳಿಗೆ ಮೂಲಭೂತ ಹಕ್ಕುಗಳು ಎಂಬ ವಿಷಯದ ಬಗ್ಗೆ ದಿಕ್ಸೂಚಿ ಭಾಷಣ ಮಾಡುತ್ತಿದ್ದ ವೇಳೆ ಚಂದ್ರಶೇಖರ್ ಈ ಮಾತುಗಳನ್ನಾಡಿದರು.

ಅಂಕಿಅಂಶಗಳ ಭದ್ರತೆ, ಖಾಸಗಿತನ ಮತ್ತು ನೆಟ್ ನ್ಯೂಟ್ರಲಿಟಿ ಬಗ್ಗೆ ಧ್ವನಿಯೆತ್ತಿರುವ ಚಂದ್ರಶೇಖರ್ ಜನರನ್ನು ಆಧಾರ್ ಪಡೆಯುವಂತೆ ಸೂಚಿಸುವುದಕ್ಕೂ ಮೊದಲು ಸರಕಾರ ಅದಕ್ಕೆ ಬೇಕಾದ ಪೂರಕ ಪರಿಸ್ಥಿತಿಯನ್ನು ನಿರ್ಮಿಸಬೇಕಿತ್ತು, ಅಂಕಿಅಂಶ ಭದ್ರತೆ ಮತ್ತು ಖಾಸಗಿತನಕ್ಕೆ ಸಂಬಂಧಪಟ್ಟಂತೆ ನೀತಿ ನಿಯಮಗಳನ್ನು ರೂಪಿಸಬೇಕಿತ್ತು ಎಂದು ತಿಳಿಸಿದರು.

ಆಧಾರ್ ಜಾರಿಯಲ್ಲಿನ ಲೋಪದೋಷಗಳನ್ನು ಟೀಕಿಸಿದ ಚಂದ್ರಶೇಖರ್, ಜನರ ಮತ್ತು ಗ್ರಾಹಕರ ಸುತ್ತ ಸೂಕ್ತವಾದ ವಾತಾವರಣವನ್ನು ನಿರ್ಮಿಸದೆ ಸರಕಾರವು ಯಾವ ರೀತಿ ಆಡಳಿತದಲ್ಲಿ ತಂತ್ರಜ್ಞಾನವನ್ನು ತುರುಕಿಸಲು ಪ್ರಯತ್ನಿಸುತ್ತದೆ ಎಂಬುದಕ್ಕೆ ಇದು ಸರಿಯಾದ ಉದಾಹರಣೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News