×
Ad

ಚೀನಾ, ಅಮೆರಿಕ 19 ಗುತ್ತಿಗೆಗಳಿಗೆ ಸಹಿ

Update: 2017-11-08 22:38 IST

ಬೀಜಿಂಗ್, ನ. 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಚೀನಾ ಭೇಟಿ ಆರಂಭಿಸಿದ್ದು, ಮೊದಲ ದಿನವೇ ಉಭಯ ದೇಶಗಳು ಒಟ್ಟು 9 ಬಿಲಿಯ ಡಾಲರ್ (ಸುಮಾರು 58,490 ಕೋಟಿ ರೂಪಾಯಿ) ಮೊತ್ತದ 19 ಗುತ್ತಿಗೆಗಳಿಗೆ ಸಹಿ ಹಾಕಿವೆ.

ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಮತ್ತು ಚೀನಾ ಉಪ ಪ್ರಧಾನಿ ವಾಂಗ್‌ಯಾಂಗ್ ಉಪಸ್ಥಿತಿಯಲ್ಲಿ ಇಲ್ಲಿನ ಗ್ರೇಟ್ ಹಾಲ್ ಆಫ್ ಚೀನಾದಲ್ಲಿ ಸಹಿ ಹಾಕುವ ಸಮಾರಂಭ ನಡೆಯಿತು.

ಇದು ಗುರುವಾರ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಉಪಸ್ಥಿತಿಯಲ್ಲಿ ನಡೆಯಲಿರುವ ದೊಡ್ಡ ಒಪ್ಪಂದಗಳ ಸಹಿ ಸಮಾರಂಭಕ್ಕೆ ಮುನ್ನುಡಿಯಷ್ಟೆ ಎಂದು ವಾಂಗ್ ತಿಳಿಸಿದರು.

ಟ್ರಂಪ್ ಚೀನಾದಲ್ಲಿ ಮೂರು ದಿನಗಳ ಪ್ರವಾಸ ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News