ಕೆರೆಯಲ್ಲಿ ಮುಳುಗಿ ಮೃತ್ಯು
Update: 2017-11-08 23:20 IST
ಉಡುಪಿ, ನ.8: ಸ್ನಾನಕ್ಕೆಂದು ಮನೆಯ ಸಮೀಪದ ಕೆರೆಗೆ ಇಳಿದಿದ್ದ ವೃದ್ಧೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಕಿದಿಯೂರಿನಿಂದ ವರದಿಯಾಗಿದೆ.
ಕಿದಿಯೂರಿನ ಕೃಷಿಕ ಕುಟುಂಬದ ರತಿ ಶೆಡ್ತಿ (80) ಮೃತ ಮಹಿಳೆ. ಅವರು ಪ್ರತಿದಿನದಂತೆ ಇಂದು ಸಹ ಕೆರೆಗೆ ಸ್ನಾನಕ್ಕೆಂದು ತೆರಳಿದ್ದು, ಹಿಂದಿರುಗಿ ಬಾರದೇ ನಾಪತ್ತೆಯಾಗಿದ್ದರು. ಆಸುಪಾಸಿನಲ್ಲಿ ಹುಡುಕಾಡಿ ಸಿಗದಾಗ ಅಗ್ನಿಶಾಮಕ ದಳದರಿಗೆ ಕರೆ ಹೋಯಿತು. ಆದರೂ ಸಂಜೆಯವರೆಗೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಕೊನೆಗೆ ಮಟಪಾಡಿ ಮುಳುಗು ತಜ್ಞ ದಿನೇಶ್ ಎಂಬವರು ಸಂಜೆ ಕೆರೆಯ ನೀರಿನಲ್ಲಿ ಮತ್ತೊಮ್ಮೆ ಜಾಲಾಡಿ ರಾತ್ರಿ 8:30ರ ಸುಮಾರಿಗೆ ಮೃತದೇಹವನ್ನು ಮೇಲಕ್ಕೆ ತಂದರೆಂದು ತಿಳಿದುಬಂದಿದೆ.