ಒಂದೂ ರನ್ ನೀಡದೇ 10 ವಿಕೆಟ್ ಕಬಳಿಸಿದ ರಾಜಸ್ಥಾನದ ಬಾಲಕ

Update: 2017-11-09 05:51 GMT

ಜೈಪುರ, ನ.9: ರಾಜಸ್ಥಾನದ 15ರ ಹರೆಯದ ಬಾಲಕ ದೇಶೀಯ ಟ್ವೆಂಟಿ-20 ಪಂದ್ಯದಲ್ಲಿ ಅತ್ಯಮೋಘ ಸಾಧನೆ ಮಾಡಿದ್ದಾನೆ. ಮಧ್ಯಮ ವೇಗದ ಬೌಲರ್ ಆಕಾಶ್ ಚೌಧರಿ ಎದುರಾಳಿ ತಂಡಕ್ಕೆ ಒಂದೂ ರನ್ ನೀಡದೇ ಎಲ್ಲ 10 ವಿಕೆಟ್‌ಗಳನ್ನು ಉರುಳಿಸಿದ ಸಾಧನೆ ಮಾಡಿದ್ದಾನೆ.

ಭಾವೆರ್ ಸಿಂಗ್ ಸ್ಮಾರಕ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ದಿಶಾ ಕ್ರಿಕೆಟ್ ಅಕಾಡಮಿಯನ್ನು ಪ್ರತಿನಿಧಿಸಿದ ಆಕಾಶ್, ಪರ್ಲ್ ಅಕಾಡಮಿ ತಂಡದ ವಿರುದ್ಧ ಈ ಸಾಧನೆ ಮಾಡಿದಾನೆ.

ಟಾಸ್ ಜಯಿಸಿದ ಪರ್ಲ್ ಅಕಾಡಮಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ದಿಶಾ ಕ್ರಿಕೆಟ್ ಅಕಾಡಮಿ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ 156 ರನ್‌ಗೆ ನಿಯಂತ್ರಿಸಿತು.

ಬೌಲಿಂಗ್ ಆರಂಭಿಸಿದ ಚೌಧರಿ 4 ಓವರ್‌ಗಳಲ್ಲಿ 4 ಮೇಡನ್ ಸಹಿತ ಒಂದೂ ರನ್ ನೀಡದೆ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ. ಚೌಧರಿ 2002ರಲ್ಲಿ ರಾಜಸ್ಥಾನ-ಉತ್ತರಪ್ರದೇಶ ಗಡಿ ಭಾಗ ಭಾರತ್‌ಪುರ ಜಿಲ್ಲೆಯಲ್ಲಿ ಜನಿಸಿದ್ದ....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News