×
Ad

ಆವರ್ಸೆ ಗ್ರಾಪಂ ಅಧ್ಯಕ್ಷರಾಗಿ ಅಬ್ದುಲ್ ಸಮದ್

Update: 2017-11-09 20:28 IST

ಉಡುಪಿ, ನ.9: ತಾಲೂಕಿನ 11ನೆ ಆವರ್ಸೆ ಗ್ರಾಪಂನ ನೂತನ ಅಧ್ಯಕ್ಷರಾಗಿ ಅಬ್ದುಲ್ ಸಮದ್ ಹೈಕಾಡಿ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಗ್ರಾಪಂ ಅಧ್ಯಕ್ಷರಾಗಿದ್ದ ಚಿತ್ತರಂಜನ್‌ದಾಸ್ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಚುನಾವಣಾಧಿಕಾರಿಯಾಗಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಅಬ್ದುಲ್ ಸಮದ್ ಹಿಲಿಯಾಣ-3 ವಾರ್ಡ್‌ನ ಎರಡನೆ ಅವಧಿಯ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News