ನ.10-11: ಮಾನಸ ಪುನರ್ವಸತಿ ಕೇಂದ್ರದ ದ್ವಿ-ದಶಮಾನೋತ್ಸವ
ಉಡುಪಿ, ನ.9:ಜಿಲ್ಲೆಯ ಪಾಂಬೂರಿನಲ್ಲಿ, ಕಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶ ಇವರಿಂದ ನಡೆಸಲ್ಪಡುವ, ಕಳೆದ ಎರಡು ದಶಕ ಗಳಿಂದ ಮಾನಸಿಕ ವಿಶೇಷ ಮಕ್ಕಳ ಸೇವೆಯಲ್ಲಿ ತೊಡಗಿರುವ ಮಾನಸ ಪುನರ್ವಸತಿ ಹಾಗೂ ತರಬೇತಿ ಕೇಂದ್ರದ ದ್ವಿ-ದಶಮಾನೋತ್ಸವ ಸಮಾರಂಭ ನ.10 ಮತ್ತು 11ರಂದು ನಡೆಯಲಿದೆ.
1997ರ ನವೆಂಬರ್ ತಿಂಗಳಲ್ಲಿ ಪ್ರಾರಂಭಗೊಂಡ ಈ ಶಾಲೆಯಲ್ಲಿ ಈಗ ಎಲ್ಲಾ ಶಿಕ್ಷಣ ನೀಡಲಾಗುತ್ತಿದೆ. 68 ಮಂದಿ ವಸತಿ ಶಾಲೆಯಲ್ಲಿದ್ದಾರೆ. ಕಳೆದ 19 ವರ್ಷಗಳಲ್ಲಿ 584 ಮಕ್ಕಳಿಗೆ ತರಬೇತಿ ನೀಡಲಾಗಿದೆ. 7 ಮಂದಿ ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ 4 ಬಂಗಾರದ, 2 ಬೆಳ್ಳಿ ಹಾಗೂಒಂದು ಕಂಚಿನ ಪದಕ ಗಳಿಸಿದ್ದಾರೆ.
ಮಂಗಳೂರಿನ ಬಿಷಪ್ ಅ.ವಂ. ಅಲೋಶಿಯಸ್ ಪಾವ್ಲೊ ಡಿಸೋಜ ಅದ್ಯಕ್ಷರಾಗಿ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಉಡುಪಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಸಿಕಂದರಾಬಾದ್ ವಿಶೇಷ ಸಂಸ್ಥೆಯ ಡಾ.ನಿವೇದಿತ ಪಾಟ್ನಾಯಕ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನ.10ರಂದು ವಿಶೇಷ ಮಕ್ಕಳ ಮಾನಸಿಕ ಬೆಳವಣಿಗೆ ಬಗ್ಗೆ ರಾಜ್ಯ ಮಟ್ಟದ ವಿಚಾರಸಂಕಿರಣವೊಂದು ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಉದ್ಘಾಟಿಸಲಿದ್ದಾರೆ. ಮಂಗಳೂರಿನ ಬಿಷಪ್ ಅ.ವಂ. ಅಲೋಶಿಯಸ್ ಪಾವ್ಲೊ ಡಿಸೋಜ ಅದ್ಯಕ್ಷರಾಗಿ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಉಡುಪಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಸಿಕಂದರಾಬಾದ್ ವಿಶೇಷ ಸಂಸ್ಥೆಯ ಡಾ.ನಿವೇದಿತ ಪಾಟ್ನಾಯಕ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಹಳೆವಿದ್ಯಾರ್ಥಿಗಳ ಸಹಮಿಲನ ಉಡುಪಿ ಧರ್ಮ ಪ್ರಾಂತದ ಪ್ರಧಾನ ಗುರು ಅ.ವಂ.ಬ್ಯಾಪ್ಟಿಸ್ಟ್ ಮಿನೇಜಸ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಪಂ ಸದಸ್ಯ ವಿಲ್ಸನ್ ರೊಡಿ್ರಗಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶೇಷ ಮಕ್ಕಳ ಸೇವೆಯಲ್ಲಿ ಸಾಧನೆಗೈದ ಸಿಸ್ಟರ್ ಮರಿಯ ಜ್ಯೋತಿ ಹಾಗೂ ಡಾ.ಪಿ.ವಿ. ಭಂಡಾರಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಬಳಿಕ ‘ಬಲೆ ತೆಲಿಪಾಲೆ’ ತಂಡ ಹಾಗೂ ಪ್ರತಿಷ್ಟಿತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷ ಎಲ್ರೋಯ್ ಕಿರಣ್ ಕ್ರಾಸ್ಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.