ಮಾನವ ಸಂಪನ್ಮೂಲಗಳ ನಿರ್ವಹಣೆ: ಉಪನ್ಯಾಸ

Update: 2017-11-09 15:47 GMT

ಮೂಡಬಿದಿರೆ,ನ.9: ಎಲ್ಲರೂ ತಾವು ಉನ್ನತ ಸ್ಥಾನದಲ್ಲಿರಬೇಕೆಂದು ಬಯಸುತ್ತಾರೆ. ಕಾರ್ಪೋರೇಟ್ ಜಗತ್ತಿನಲ್ಲಿ ಒಬ್ಬ ಉತ್ತಮ ಮ್ಯಾನೇಜರ್ ಆಗುವ ಮೊದಲು ಒಳ್ಳೆಯ ನಾಯಕನಾಗುವುದು ಅವಶ್ಯ ಎಂದು ಆಳ್ವಾಸ್ ಸ್ವಾತ್ತಕೋತ್ತರ ಕಾಲೇಜಿನ ಎಮ್.ಕಾಮ್ ವಿಭಾಗದ ಸಂಯೋಜಕ ಪ್ರೊ. ಪವನ್‍ಕಿರಣ್‍ಕೆರೆ ತಿಳಿಸಿದರು. 
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ  ಎಂ.ಕಾಂ ಎಚ್‍ಆರ್‍ಡಿ ವಿಭಾಗವು ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಲಬ್‍ನ ಆಶ್ರಯದಲ್ಲಿ  ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡಿದ್ದ  ಒಂಬತ್ತನೇ ಕಾರ್ಯಕ್ರಮದಲ್ಲಿ 'ಮಾನವ ಸಂಪನ್ಮೂಲಗಳ ನಿರ್ವಹಣೆ' ಎಂಬ ವಿಷಯದ ಕುರಿತು ಮಾತನಾಡಿದರು. 

ಇಂದು ಎಲ್ಲಾ ಕ್ಷೇತ್ರಗಳು ವ್ಯಾವಹಾರಿಕ ಮಾರ್ಗದಲ್ಲಿ ಸಾಗುತ್ತಿವೆ. ಮಾರ್ಕೆಟಿಂಗ್ ಎನ್ನುವುದು ವ್ಯವಹಾರದ ಮುಖವಾದರೆ, ಮಾನವ ಸಂಪನ್ಮೂಲವು ಇದರ ಬೆನ್ನೆಲುಬಾಗಿದೆ. ಮಾನವ ಸಂಪನ್ಮೂಲದ ಅಭಿವೃದ್ಧಿಯು ಜ್ಞಾನವನ್ನು ವೃದ್ಧಿಸಿ ಉತ್ತಮ ಭವಿಷ್ಯ ರೂಪಿಸುವುದನ್ನು ಪ್ರತಿಪಾದಿಸುತ್ತದೆ. ಹಾಗಾಗಿ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರವು ಉದ್ಯೋಗಾಕಾಂಕ್ಷಿಗಳಿಗೆ ತೆರೆದುಕೊಂಡಿದೆ. ಆದರೆ ತಂತ್ರಜ್ಞಾನದ ಬೆಳವಣಿಗೆಯಿಂದ ಸ್ಪರ್ಧೆ ಹೆಚ್ಚುತ್ತಿದೆ. ಹಾಗಾಗಿ ಸಂವಹನ, ವ್ಯವಹಾರಿಕ, ಒತ್ತಡ ನಿರ್ವಹಣೆಯಂಥ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕಾಗಿದೆ ಎಂದರು. ಮಾನವ ಸಂಪನ್ಮೂಲ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. 

 ಒಬ್ಬ ವ್ಯಕ್ತಿ ತನ್ನ ಕೌಶಲ್ಯಗಳಿಂದ ತನ್ನ ಸಂಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಬಹುದು. ಸಂಸ್ಥೆಯು ಅದನ್ನೇ ತನ್ನ ಉದ್ಯೋಗಿಗಳಿಂದ ನಿರೀಕ್ಷಿಸುತ್ತದೆ. ಇದಕ್ಕನುಗುಣವಾಗಿ ಕಾರ್ಯ ನಿರ್ವಹಿಸುವ ಸಾಮಥ್ರ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 
ಎಂಕಾಮ್ ಎಚ್.ಆರ್‍ಡಿ ವಿಭಾಗದ ಸಂಯೋಜಕಿ ಶಾಝಿóಯಾ ಸೈಯದ್ ಮತ್ತು ವಿಭಾಗದ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮನ್ನು ಅರ್ಚನಾ ವಂದಿಸಿ, ಜೀವಿತಾ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News