ಮಲ್ಪೆ : ಬಾವಿಗೆ ಬಿದ್ದು ಮೃತ್ಯು
Update: 2017-11-09 23:15 IST
ಮಲ್ಪೆ, ನ.9: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.8ರಂದು ತೆಂಕನಿಡಿಯೂರು ಗ್ರಾಮದ ಗರಡಿಮಜಲಿನ ವೀರ ಮಾರುತಿ ಭಜನಾ ಮಂದಿರದ ಬಳಿ ನಡೆದಿದೆ.
ಮೃತರನ್ನು ಗರಡಿಮಜಲಿನ ಜಯಕರ ಕೋಟ್ಯಾನ್(45) ಎಂದು ಗುರುತಿಸ ಲಾಗಿದೆ. ರಾತ್ರಿ ಮಲಗಿದ್ದವರು ಬೆಳಗ್ಗೆ ನೋಡುವಾಗ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಅವರ ಮೃತದೇಹವು ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ರಾತ್ರಿ ನೀರನ್ನು ತರಲು ಬಾವಿಯ ಬಳಿ ಹೋದ ಜಯಕರ ಅಕಸ್ಮಿಕ ವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.