×
Ad

ಬಿಎಸ್‌ವೈ, ಡಿವಿ, ಶೋಭಾರಿಂದ ಹಿಂದೂ ಕಾರ್ಯಕರ್ತರ ಹತ್ಯೆ ಎಂದ ಶ್ರೀರಾಮುಲು !

Update: 2017-11-10 21:28 IST

ಸುಳ್ಯ, ನ.10: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಸಂಘ ಪರಿವಾರದ ಕಾರ್ಯಕರ್ತರನ್ನು ಕೊಲ್ಲುವ ಕೆಲಸ ಮಾಡುತ್ತಿದೆ. ಹಿಂದೆ ಬಿಜೆಪಿ ಸರಕಾರದಲ್ಲಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ, ಶೋಭಾ ಕರಂದ್ಲಾಜೆ ಸೇರಿಕೊಂಡು ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ಬಳ್ಳಾರಿಯ ಬಿಜೆಪಿ ಸಂಸದ ಶ್ರೀರಾಮುಲು ಹೇಳಿದ್ದಾರೆ. ಬಾಯ್ತಪ್ಪಿನಿಂದಾಗಿ ಈ ಹೇಳಿಕೆಯನ್ನು ಅವರು ನೀಡಿದ್ದಾರೆ.

ಸುಳ್ಯದಲ್ಲಿ ಶುಕ್ರವಾರ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಈ ರೀತಿ ಮಾತನಾಡಿದ ಶ್ರೀರಾಮುಲು, ಬಳಿಕ ಕೆಲಕಾಲ ವೇದಿಕೆಯಿಂದ ನಾಪತ್ತೆಯಾಗಿದ್ದರು.

ಶ್ರೀರಾಮುಲು ಈ ರೀತಿ ಆರೋಪ ಮಾಡುತ್ತಿದ್ದ ವೇಳೆ ವೇದಿಕೆಯಲ್ಲೇ ಇದ್ದ ಬಿಎಸ್‌ವೈ, ಡಿವಿ, ಶೋಭಾ ಯಾರೂ ಕೂಡಾ ಆಕ್ಷೇಪಿಸದಿರುವುದು ವಿಶೇಷ. ಆದರೆ ಕಾರ್ಯಕರ್ತರಲ್ಲಿ ಇದು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಮಾತು ಮುಗಿಸಿದ ಬಳಿಕ ಅಲ್ಪ ಸಮಯ ವೇದಿಕೆಯಲ್ಲಿದ್ದ ಶ್ರೀರಾಮುಲು ಬಳಿಕ ನಾಪತ್ತೆಯಾಗಿದ್ದರು.
ಶ್ರೀರಾಮುಲು ಅವರ ಭಾಷಣದ ಈ ವೀಡಿಯೊ ಟವಿ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲೂ ಇದು ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News