ರಶ್ಯ ಅಥವಾ ಕಝಖ್‌ಸ್ತಾನದಲ್ಲಿ ಪರಮಾಣು ಅವಘಡ?

Update: 2017-11-10 16:34 GMT

ಪ್ಯಾರಿಸ್, ನ. 10: ಇತ್ತೀಚಿನ ವಾರಗಳಲ್ಲಿ ವಿಕಿರಣಶೀಲ ಮಾಲಿನ್ಯದ ಮೋಡವು ಯುರೋಪ್‌ನ ಆಕಾಶವನ್ನು ಆವರಿಸಿದ್ದು, ರಶ್ಯ ಅಥವಾ ಕಝಖ್‌ಸ್ತಾನದ ಪರಮಾಣು ಸ್ಥಾವರವೊಂದರಲ್ಲಿ ಅವಘಡ ಸಂಭವಿಸಿರುವ ಸಾಧ್ಯತೆಯಿದೆ ಎಂದು ಫ್ರಾನ್ಸ್‌ನ ಪರಮಾಣು ಸುರಕ್ಷತೆ ಸಂಸ್ಥೆ ಐಆರ್‌ಎಸ್‌ಎನ್ ಗುರುವಾರ ಹೇಳಿದೆ.

ಆದಾಗ್ಯೂ, ಪರಮಾಣು ರಿಯಾಕ್ಟರ್‌ನಲ್ಲಿ ಅಪಘಾತ ಸಂಭವಿಸಿರುವ ಸಾಧ್ಯತೆಯನ್ನು ತಳ್ಳಿಹಾಕಿರುವ ಸಂಸ್ಥೆಯು, ಪರಮಾಣು ಇಂಧನ ಸಂಸ್ಕರಣೆ ಸ್ಥಳದಲ್ಲಿ ಅಥವಾ ವಿಕಿರಣಶೀಲ ವೈದ್ಯಕೀಯ ಕೇಂದ್ರದಲ್ಲಿ ಅವಘಡ ಸಂಭವಿಸಿರಬಹುದಾಗಿದೆ ಎಂದಿದೆ.

ಈವರೆಗೆ ಯುರೋಪ್‌ನಲ್ಲಿ ಮಾನವ ಆರೋಗ್ಯ ಮೇಲೆ ಅಥವಾ ಪರಿಸರದ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ಐಆರ್‌ಎಸ್‌ಎನ್ ತಿಳಿಸಿದೆ.

ವಿಕಿರಣಶೀಲ ಅನಿಲ ಬಿಡುಗಡೆ ಎಲ್ಲಿ ಆಗಿದೆ ಎಂಬುದನ್ನು ನಿಖರವಾಗಿ ಹೇಳಲು ಅಸಾಧ್ಯ ಎಂದಿರುವ ಅದು, ಹವಾಮಾನ ಮಾದರಿಯನ್ನು ಆಧರಿಸಿ ಹೇಳುವುದಾದರೆ ಉರಾಲ್ ಪರ್ವತಸಾಲಿನ ದಕ್ಷಿಣದಲ್ಲಿ ಉರಾಲ್ ಮತ್ತು ವೋಲ್ಗಾ ನದಿಯ ನಡುವಿನ ಸ್ಥಳವೊಂದರಲ್ಲಿ ಅಪಘಾತ ಸಂಭವಿಸಿರಬಹುದು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News