ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ
Update: 2017-11-10 22:08 IST
ಬೈಂದೂರು, ನ.10: ಬೈಂದೂರು ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಬೈಂದೂರು ಪೊಲೀಸರು ನ.10 ರಂದು ಬೆಳಗ್ಗೆ 8.30ರ ಸುಮಾರಿಗೆ ಬಂಧಿಸಿದ್ದಾರೆ.
ಯಳಜಿತ್ ಗ್ರಾಮದ ತೊಂಡ್ಲೆಯ ಲಕ್ಷ್ಮಣ ಗೌಡ (38) ಬಂಧಿತ ಆರೋಪಿ. ಈತನಿಂದ ಒಟ್ಟು 2,110 ರೂ. ಮೌಲ್ಯದ 6.75 ಲೀಟರ್ ಪ್ರಮಾಣದ ಮದ್ಯವನ್ನು ಮತ್ತು 650 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.