×
Ad

ಬೆಳ್ತಂಗಡಿ: ಬಿಜೆಪಿಯ ಪರಿವರ್ತನಾ ಯಾತ್ರೆ

Update: 2017-11-10 22:38 IST

ಬೆಳ್ತಂಗಡಿ, ನ. 10: ಅಭ್ಯರ್ಥಿ ಯಾರು ಎಂಬುದನ್ನು ಮುಖ್ಯವಾಗಿಸದೆ ಪಕ್ಷದ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಅಭ್ಯರ್ಥಿಗಳನ್ನು ಪಕ್ಷದ ರಾಜ್ಯ ಅಧ್ಯಕ್ಷರಾಗಲಿ ಅಧವಾ ರಾಷ್ಟ್ರೀಯ ಅಧ್ಯಕ್ಷರಾಗಲಿ ನಿರ್ಧರಿಸುವುದಲ್ಲ ಜನರ ಅಭಿಪ್ರಾಯಗಳನ್ನು ಅರಿತು ಅಭ್ಯರ್ಥಿಯ ಆಯ್ಕೆ ಮಾಡಲಾಗುವುದ ಅದಕ್ಕಾಗಿ ಈಗಾಲೆ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಅವರು ಬೆಳ್ತಂಗಡಿಯ ಪ್ರಸನ್ನ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರಿಗೂ ಚುನಾವಣೆಯಲ್ಲಿ ಅವಕಾಶ ಸಿಗಲು ಸಾಧ್ಯವಿಲ್ಲ ಅವಕಾಶ ವಂಚಿತರಾದವರಿಗೆ ಪಕ್ಷ ಅಧಿಕಾರಕ್ಕೆ ಬಂದರೆ ಉತ್ತಮ ಅವಕಾಶಗಳನ್ನು ನೀಡುವುದಾಗಿಯೂ ಅವರು ಭರವಸೆ ನೀಡಿದರು. ರಾಜ್ಯವನ್ನು ಕಾಂಗ್ರೆಸ್ ಮುಕ್ತವಾಗಿಸಲು ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸಿ ಎಂದ ಅವರು ಕಾಂಗ್ರೆಸ್‌ನಲ್ಲಿ ಈಗಾಗಲೆ ಆಂತರಿಕ ಕಚ್ಚಾಟ ಆರಂಭಗೊಂಡಿದೆ ಅವರ ಬಣ್ಣ ಬಯಲಾಗಿದ್ದು ಅಲ್ಲಿ ಭ್ರಷ್ಟರೇ ತುಂಬಿದ್ದಾರೆ ಪಕ್ಷ ಅಧಿಕಾರಕ್ಕೆ ಬಂದರೆ ಒಂದೇ ಗಂಟೆಯಲ್ಲಿ ಕಾಂಗ್ರೆಸ್ ಸರಕಾರದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮಾತನಾಡಿ ನೋಟು ಅಮಾನ್ಯದಿಂದಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆಭಯೋತ್ಪಾದನೆ ಕಡಿಮೆಯಾಗಿದೆ ಕಪ್ಪು ಹಣದ ಕುಳಗಳನ್ನು ನಿಯಂತ್ರಿಸಲಾಗಿದೆ ಪ್ರಧಾನಿ ಮೋದಿಯವರು ನುಡಿದಂತೆ ನಡೆದಿದ್ದಾರೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸರಕಾರದಿಂದ ಬರುವ ಅನುದಾನಗಳನ್ನು ರಾಜ್ಯ ಸರಕಾರ ದುರುಪಯೋಗ ಮಾಡುತ್ತಿದೆ, ಬಡವರ ಅನ್ನಕ್ಕೆ ಕಾಂಗ್ರೆಸ್ ಕೈಹಾಕುತ್ತಿದೆ. ಅನ್ನಭಾಗ್ಯದ ಅಕ್ಕಿ ಕಾಂಗ್ರೆಸ್ ಶಾಸಕರುಗಳ ಚೇಲಾಗಳ ಪಾಲಾಗುತ್ತಿದೆ. ಬೆಳಗಳೂರಿನಲ್ಲಿ ಗುತ್ತಿಗೆದಾರರು ಹಾಗೂ ಸರಕಾರ ಸೇರಿಕೊಂಡು ಅಭಿವೃದ್ದಿ ಕಾಮಗಾರಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ನುಂಗಿ ಹಾಕಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ಉಪಾಧ್ಯಕ್ಷ ಸಂಸದ ಶ್ರೀರಾಮಲು, ಸಂಸದ ನಳಿನ್‌ಕುಮಾರ್ ಕಟೀಲು, ಮಾಜಿ ಸಚಿವ ಕುಮಾರ ಬಂಗಾರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಮುಖಂಡರುಗಳಾದ ಆಯನೂರು ಮಂಜುನಾಧ್, ಭಾರತಿ ಶೆಟ್ಟಿ, ತೇಜಸ್ವಿನಿ, ಮೇದಪ್ಪ, ಸಂಜೀವ ಮಠಂದೂರು, ಗಣೇಶ್ ಕಾರ್ಣಿಕ್, ಮೀನಾಕ್ಷಿ ಶಾಂತಿಗೋಡು, ಕೆ ಗಂಗಾಧರ ಗೌಡ, ಕೆ ಪ್ರಭಾಕರ ಬಂಗೇರ, ಪ್ರತಾಪಸಿಂಹ ನಾಯಕ್, ಕೊರಗಪ್ಪನಾಯ್ಕ, ಪ್ರಭಾಕರಶೆಟ್ಟಿ, ಹರೀಶ್ ಪೂಂಜ, ಕಸ್ತೂರಿ ಪಂಜ, ಉದಯಕುಮಾರ್‌ಶೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.

ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್ ಜಿ ಗೌಡ ಸ್ವಾಗತಿಸಿದರು, ವಿಜಯಗೌಡ ಹಾಗೂ ವಿಜಯ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು.
 

ಬೆಳ್ತಂಗಡಿಯ ಅಭಿವೃದ್ದಿಗೆ ಬರುವ ಅನುದಾನಗಳು ಇನ್ನೂ ಸಾಮಾನ್ಯ ಜನರಿಗೆ ತಲುಪುತ್ತಿಲ್ಲ, ಹೆಚ್ಚೆಂದರೆ ಅದು ಶಾಸಕ ವಸಂತ ಬಂಗೇರರ ಕಚೇರಿಯ ವರೆಗೆ ಬರುತ್ತಿದೆ ಅಷ್ಟೇ. ಅದು ನಿಲ್ಲಬೇಕು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅನುದಾನಗಳು ಮನೆಮನೆಗೆ ತಲುಪುವಂತೆ ಮಾಡುತ್ತೇವೆ.
-ಡಿ.ವಿ ಸದಾನಂದಗೌಡ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News