ದುಬೈನಲ್ಲಿ ಜಾಗತಿಕ ಕ್ರಿಕೆಟ್ ಅಕಾಡೆಮಿಗೆ ಧೋನಿ ಚಾಲನೆ

Update: 2017-11-11 18:42 GMT

ದುಬೈ, ನ.11: ಎರಡು ವಿಶ್ವಕಪ್‌ಗಳಲ್ಲಿ ಪ್ರಶಸ್ತಿ ಜಯಿಸಿರುವ ಮಹೇಂದ್ರ ಸಿಂಗ್ ಧೋನಿ ಶನಿವಾರ ಜಾಗತಿಕ ಕ್ರಿಕೆಟ್ ಅಕಾಡಮಿಯನ್ನು ಉದ್ಘಾಟಿಸಿದ್ದಾರೆ. ಅಕಾಡಮಿಯನ್ನು ದುಬೈ ಮೂಲದ ಪೆಸಿಫಿಕ್ ಸ್ಪೋರ್ಟ್ಸ್‌ಕ್ಲಬ್ ಹಾಗೂ ಅರ್ಕಾಸ್ ಸ್ಪೋರ್ಟ್ಸ್ ಕ್ಲಬ್ ಜಂಟಿಯಾಗಿ ಸ್ಥಾಪಿಸಿವೆ. ಎಂಎಸ್ ಧೋನಿ ಕ್ರಿಕೆಟ್ ಅಕಾಡಮಿ ಎಂದು ಹೆಸರಿಡಲಾಗಿದ್ದು, ಭಾರತದ ಕೋಚ್‌ಗಳು ಯುವ ಆಟಗಾರರಿಗೆ ಕೋಚಿಂಗ್ ನೀಡಲಿದ್ದಾರೆ.

 ಅಕಾಡಮಿಯಲ್ಲಿ ನಾಲ್ಕು ಟರ್ಫ್‌ಗಳು, ಮೂರು ಸಿಮೆಂಟ್ ಹಾಗೂ ಮೂರು ಮ್ಯಾಟ್ ಪಿಚ್‌ಗಳು, ಸ್ಪಿನ್ ಹಾಗೂ ಸ್ವಿಂಗ್ ಬೌಲಿಂಗ್ ಮಿಷನ್, ಸೇಫ್ಟಿ ನೆಟ್ಸ್, ರಾತ್ರಿ ಅಭ್ಯಾಸಕ್ಕೆ ಬೆಳಕಿನ ವ್ಯವಸ್ಥೆ ಹಾಗೂ ವೀಡಿಯೊ ವಿಶ್ಲೇಷಣೆಗಳು ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News