ಜಪ್ಪು ವರ್ತುಲ ಸದ್ಭಾವನಾ ವೇದಿಕೆ: ದೀಪಾವಳಿ ಸೌಹಾರ್ದ ಕೂಟ
Update: 2017-11-12 22:09 IST
ಮಂಗಳೂರು, ನ. 12: ಜಪ್ಪು ವರ್ತುಲ ಸದ್ಭಾವನಾ ವೇದಿಕೆಯ ವತಿಯಿಂದ ಇತ್ತೀಚೇಗೆ ಮೋರ್ಗನ್ಸ್‌ಗೇಟ್‌ನಲ್ಲಿರುವ ಕಾಸಿಯಾ ಚರ್ಚ್ ಹಾಲ್‌ನಲ್ಲಿ ದೀಪಾವಳಿ ಸೌಹಾರ್ದ ಕೂಟ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲಯನ್ಸ್ ಜಿಲ್ಲೆಯ 317 ಡಿ ಇದರ ಪ್ರಾದೇಶಿಕ ಅಧ್ಯಕ್ಷ ತುಪ್ಪೆಕಲು ನರಸಿಂಹ ಶೆಟ್ಟಿ ಅವರು ಇತರ ಧರ್ಮಗಳನ್ನು ಗೌರವಿಸಿ ಸದ್ಭಾವನೆಯಿಂದ ಜೀವಿಸಿದರೆ ಮಾತ್ರ ಪರಸ್ಪರ ಅರಿತುಕೊಳ್ಳಲು ಸಾಧ್ಯ ಎಂದರು.
ಬಿಷಪ್ ಆಫ್ ಮಂಗಳೂರು ಇದರ ಪಿಆರ್‌ಒ ಫಾ.ವಿಲಿಯಂ ಮಿನೇಜಸ್, ಕರಾವಳಿ ಕಾಲೇಜ್ ಆಫ್ ಫಾರ್ಮಸಿಯ ಪ್ರೊಫೆಸರ್ ಡಾ. ಮುಹಮ್ಮದ್ ಮುಬೀನ್ ಮಾತನಾಡಿದರು.
ಸುಜಾತಾ ಅರುಣ್ ಪ್ರಾರ್ಥನಾ ಗೀತೆ ಹಾಡಿದರು. ಸದ್ಭಾವನಾ ವೇದಿಕೆಯ ಅಧ್ಯಕ್ಷ ಎಂ.ವಿ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಸಾಲಿಹ್ ಮುಹಮ್ಮದ್ ವಂದಿಸಿದರು. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.