ಕೊಣಾಜೆ: ಬ್ಯಾನರ್ ಹರಿದವರ ವಿರುದ್ಧ ಕ್ರಮಕ್ಕೆ ಒತ್ತಾಯ
Update: 2017-11-12 22:28 IST
ಕೊಣಾಜೆ, ನ. 12: ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಸಚಿವ ಯು.ಟಿ.ಖಾದರ್ ಅವರ ಅನುದಾನದಲ್ಲಿ ವಿವಿಧ ಕಡೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹಾಕಲಾಗಿದ್ದ ಅಭಿನಂದನಾ ಬ್ಯಾನರ್‌ಗಳನ್ನು ಹರಿದು ಹಾನಿಗೊಳಿಸಿದ ಕಿಡಿಗೇಡಿಗಳ ವಿರುದ್ದ ಕ್ರಮಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಪಂ. ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಜೀರು, ತಾಲೂಕು ಪಂ. ಸದಸ್ಯರಾದ ಹೈದರ್ ಕೈರಂಗಳ, ಫಜೀರು ಗ್ರಾಮ ಪಂ. ಅಧ್ಯಕ್ಷ ಸೀತರಾಮ ಶೆಟ್ಟಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ಸಮೀರ್ ಫಜೀರು, ಸತ್ತಾರ್ ಕೈರಂಗಳ, ಗುರುರಾಜ್ ಭಟ್ ಕೈರಂಗಳ, ಇಸ್ಮಾಯಿಲ್ ಮೋರ್ಲ, ಫ್ಲೈವನ್ ಡಿಸೋಜ, ಅಶ್ರಫ್ ಕುರ್ನಾಡು, ಜಯಂತ್ ಕುರ್ನಾಡು, ಅಶ್ವಿನ್ ಡಿಸೋಜ, ಫಜೀರು ಪಂ. ಸದಸ್ಯರಾದ ರಫೀಕ್ , ಹಮೀದ್, ಕಾಸಿಂ ಕುರ್ನಾಡು, ಸಿದ್ದೀಕ್ ಕೈರಂಗಳ, ಅಶ್ರಫ್ , ಖಲೀಲ್ , ನಿತೀಶ್ ಕೈರಂಗಳ ಇನ್ನಿತರರು ಉಪಸ್ಥಿತರಿದ್ದರು.