ಸ್ನೇಹಿತನ ಪುತ್ರಿಯ ಮದುವೆಯಲ್ಲಿ ಭಾಗವಹಿಸಿ ಶುಭ ಹಾರೈಸಿದ ಸಿಎಂ
Update: 2017-11-12 22:37 IST
ಬೆಳ್ತಂಗಡಿ, ನ. 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳ್ತಂಗಡಿಗೆ ಆಗಮಿಸಿ ಅವರ ಸ್ನೇಹಿತ ಕಾಂಗ್ರೆಸ್ ಮುಖಂಡ ನಾಭಿರಾಜ್ ಜೈನ್ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಸಂಜೆ 7.20 ಕ್ಕೆ ಬೆಳ್ತಂಗಡಿಗೆ ಆಗಮಿಸಿದ ಮುಖ್ಯಮಂತ್ರಿ ಇಲ್ಲಿನ ಬಸದಿಯ ಗುಣವತಿಯಮ್ಮ ಸಭಾಭವನದಲ್ಲಿ ನಡೆಯುತ್ತಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಿದರು. ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಧ ರೈ, ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹಾಗೂ ಇತರರು ಇದ್ದರು.
ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ ಮುಖ್ಯಮಂತ್ರಿ ಮದುವೆ ಕಾರ್ಯಕ್ರಮದಲ್ಲಿ ಏನು ಮಾತನಾಡುವುದು ಎಂದಷ್ಟೇ ಹೇಳಿ ಮುಂದುವರಿದರು. ಕೇವಲ ಹದಿನೈದು ನಿಮಿಷಗಳ ಕಾಲ ಮಾತ್ರ ಅವರು ಬೆಳ್ತಂಗಡಿಯಲ್ಲಿ ಇದ್ದರು. ಮುಖ್ಯಮಂತ್ರಿ ಆಗಮನದ ಹಿನ್ನಲೆಯಲ್ಲಿ ಪೋಲೀಸರು ಇಡೀ ನಗರದಲ್ಲಿ ಬಿಗುವಿನ ಬಂದೋಬಸ್ತ್ ಮಾಡಿದ್ದರು.