ಮೂಡುಬಿದಿರೆ: 15ನೆ ವರ್ಷದ "ಕೋಟಿ-ಚೆನ್ನಯ" ಕಂಬಳೋತ್ಸವ ಸಮಾಪನ
ಮೂಡುಬಿದಿರೆ, ನ. 12: ಕಳೆದ ಒಂದು ವರ್ಷದಿಂದ ನಿಷೇಧಕ್ಕೆ ಒಳಗಾಗಿದ್ದ ಕಂಬಳಕ್ಕೆ ಸುಪ್ರಿಂ ಕೋರ್ಟ್ ಹಸಿರು ನಿಶಾನೆ ತೋರಿದ ಬಳಿಕ ಮೂಡುಬಿದಿರೆಯಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ "ಕೋಟಿ-ಚೆನ್ನಯ" ಜೋಡುಕರೆ ಕಂಬಳವು ರವಿವಾರ ಸಮಾಪನಗೊಂಡಿತು.
ಮೂಡುಬಿದಿರೆಯ ಒಂಟಿಕಟ್ಟೆಯ ಬಳಿಯ ಕಡಲಕೆರೆ ನಿಸರ್ಗಧಾಮದ ಕಂಬಳದ ಕರೆಯಲ್ಲಿ ಶನಿವಾರ ಬೆಳಗ್ಗೆ ಆರಂಭಗೊಂಡ 15 ನೆ ವರ್ಷದ ಹೊನಲು ಬೆಳಕಿನ "ಕೋಟಿ-ಚೆನ್ನಯ" ಜೋಡುಕರೆ ಕಂಬಳೋತ್ಸವವನ್ನು ಕರಾವಳಿಯಲ್ಲಿ ವಿಜಯೋತ್ಸವ ಕಂಬಳವನ್ನಾಗಿ ಆಚರಿಸಲಾಗಿದೆ. ರಾಜಕೀಯ, ಸಾಂಸ್ಕೃತಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ರಂಗದ ಹಲವು ಪ್ರಮುಖರು ಭಾಗವಹಿಸಿರುವ ಜೊತೆಗೆ ಕಿಕ್ಕಿರಿದ ಜನಸಂದಣಿ ಕಂಬಳದ ಯಶಸ್ಸಿಗೆ ಸಾಕ್ಷಿಯಾಯಿತು.
ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂ.ಎನ್. ರಾಜೇಂದ್ರ ಕುಮಾರ್, ಕಬಡ್ಡಿ ಕ್ರೀಡೆಯ ಸಾಧಕ ಸುಕೇಶ್ ಹೆಗ್ಡೆ ಕಡ್ತಲ, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ, ಉದ್ಯಮಿ ಗಣೇಶ್ ಕಾಮತ್ ಸಹಿತ ಕಂಬಳದ ಇಬ್ಬರು ಓಟಗಾರರಾದ ಕೊಳಕೆಗುತ್ತು ಆನಂದ ಕೋಟ್ಯಾನ್ ಮತ್ತು ನಕೆ್ರ ಜಯಕರ ಮಡಿವಾಳ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಂಬಳ ನಡೆಯುವ ಸ್ಥಳದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದರಿಂದರಿಂದ ಟ್ರಾಪಿಕ್ ಸಮಸ್ಯೆಯೂ ಕಂಡು ಬಂದು, ಪೊಲೀಸರು ಹರಸಾಹಸ ಪಡುವಂತಾಗಿತ್ತು. ಭದ್ರತೆಯ ದೃಷ್ಟಿಯಿಂದ ಮುಂಜಾಗರೂಕತಾ ಕ್ರಮವಾಗಿಕಂಬಳ ನಡೆಯುವ ಆವರಣದೊಳಗಡೆ ಹೆಚ್ಚಿನ ಸಿಸಿ ೆಮರಾಗಳನ್ನು ಅಳವಡಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ,ಕಂಬಳ ಸಮಿತಿಯ ಅಧ್ಯಕ್ಷ, ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಕೋಶಾಧ್ಯಕ್ಷ ಭಾಸ್ಕರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ, ಕಾರ್ಯದರ್ಶಿಗಳಾದ ಸುರೇಶ್ ಪ್ರಭು, ರತ್ನಾಕರ ಸಿ ಮೊಲಿ, ಚಂದ್ರಹಾಸ ಸನಿಲ್, ಹರ್ಷವರ್ಧನ ಪಡಿವಾಳ್, ಮೂಡುಬಿದಿರೆ ತಹಸೀಲ್ದಾರ್ ಮೊಹಮ್ಮದ್ ಇಸಾಕ್, ಎಸಿಎಫ್ ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿ ಅರಣ್ಯ ಅಧಿಕಾರಿ ಪ್ರಕಾಶ್ ಪೂಜಾರಿ, ಎಸ್‌ಐ ಶಂಕರ ನಾಯರಿ, ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ ಮಗ ಸಹಿತ ಗಣ್ಯರು ಪಾಲ್ಗೊಂಡಿದ್ದರು.
ಕಂಬಳ ಫಲಿತಾಂಶ
ಕನೆಹಲಗೆ:
ಪ್ರಮ: ಬಾರ್ಕೂರು ಶಾಂತರಾಮ ಶೆಟ್ಟಿ
ಹಲಗೆ ಮುಟ್ಟಿದವರು: ಶಿರೂರು ಮಂದಾರ್ತಿಮುದ್ದುಮನೆ ಗೋಪಾಲ ನಾಯ್ಕ
ದ್ವಿತೀಯ: ವಾಮಂಜೂರು ತಿರುವೈಲ ಗುತ್ತು ನವೀನ್’ಚಂದ್ರ ಆಳ್ವ
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್
ಹಗ್ಗ ಹಿರಿಯ:
ಪ್ರಥಮ: ಮೂಬಿದಿರೆ ಕರಿಜೆ ವಿನು ವಿಶ್ವನಾಥ ಶೆಟ್ಟಿ
ಓಡಿಸಿದವರು: ಪಣಪೀಲು ಪ್ರವೀನ್ ಕೋಟ್ಯಾ ನ್
ದ್ವಿತೀಯ: ಕಾರ್ಕಳ ಜೀವನ್’ದಾಸ್ ಅಡ್ಯತಾಯ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ್ರು
ಹಗ್ಗ ಕಿರಿಯ:
ಪ್ರಥಮ: ನಿಟ್ಟೆ ಪರಪ್ಪಾ ಡಿ ಸುರೇಶ್ ಕೋಟ್ಯಾನ್
ಓಡಿಸಿದವರು: ನಕ್ರೆ ಮಂಜುನಾಥ ಭಂಡಾರಿ
ದ್ವಿತೀಯ: ಮೂಬಿದಿರೆ ಕರಿಜೆ ವಿನು ವಿಶ್ವನಾಥ ಶೆಟ್ಟಿ
ಓಡಿಸಿದವರು: ಪಣಪೀಲು ಪ್ರವೀನ್ ಕೋಟ್ಯಾ ನ್
ನೇಗಿಲು ಹಿರಿಯ:
ಪ್ರಥಮ: ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ಟಿ ’ಎ’
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ್ರು
ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ ’ಎ’
ಓಡಿಸಿದವರು: ಹೊಕ್ಕಾಡಿಗೋಳಿ ಕ್ಕೇರಿ ಸುರೇಶ್ ಮಾಧವ ಶೆಟ್ಟಿ
ನೇಗಿಲು ಕಿರಿಯ:
ಪ್ರಥಮ: ಅಳಿಯೂರು ಮಿತ್ತೋಟ್ಟು ಸೀತಾರಾಮ್ ಆನಂದ ಶೆಟ್ಟಿ ’ಎ’
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ’ಬಿ’
ಓಡಿಸಿದವರು: ಆಳದಂಗಡಿ ರವಿಕುಮಾರ್
ಅಡ್ಡಹಲಗೆ:
ಪ್ರಥಮ: ಹಂಕರಜಾಲು ರಾಮಚಂದ್ರ ಭಿರ್ಮಣ್ಣ ಶೆಟ್ಟಿ ’ಬಿ
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್
ದ್ವಿತೀಯ: ಗುರುಪುರ ಕೆದುಬರಿ ಯಶೋಧ ಗುರುವಪ್ಪ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ.
ಕೆನೆಹಲಗೆ ವಿಭಾಗದಲ್ಲಿ 2, ಅಡ್ಡಹಲಗೆ-7, ಹಗ್ಗ ಹಿರಿಯ-15, ನೇಗಿಲು ಹಿರಿಯ-33, ಹಗ್ಗ ಕಿರಿಯ-20
ನೇಗಿಲು ಕಿರಿಯ-60 ಜೊತೆ ಸಹಿತ ಒಟ್ಟು 137 ಕೋಣಗಳು ಭಾಗವಹಿಸಿದ್ದವು.
ಹಗ್ಗ ಹಾಗೂ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಎರಡು ಪವನ್, ದ್ವಿತೀಯ ಒಂದು ಪವನ್ ಚಿನ್ನ, ಹಿರಿಯ ವಿಭಾಗದಲ್ಲಿ ಪ್ರಥಮ 1 ಪವನ್ ಹಾಗೂ ದ್ವಿತೀಯ ಅರ್ಧ ಪವನ್ ಚಿನ್ನ ಹಾಗೂ ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್ ಚಿನ್ನದೊಂದಿಗೆ ಪುರಸ್ಕರಿಸಲಾಯಿತು.