×
Ad

ಮುಂಡಗೋಡ: ವಿದ್ಯುತ್ ತಗುಲಿ ಟಿಬೇಟ್ ವ್ಯಕ್ತಿ ಮೃತ್ಯು

Update: 2017-11-12 22:45 IST

ಮುಂಡಗೋಡ, ನ. 12: ವಿದ್ಯುತ್ ತಂತಿ ತಗುಲಿ ಟಿಬೇಟ್ ಬೌದ್ಧ ಸನ್ಯಾಸಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಟಿಬೇಟಿಯನ್ ಲಾಮಾ ಕ್ಯಾಂಪ್ ನಂ 2 ರಲ್ಲಿ ಜರುಗಿದೆ.

ಮೃತರನ್ನು ಲೋಪಸಂಗ್ (28) ಬೌದ್ಧ ಸನ್ಯಾಸಿ ಎಂದು ಗುರುತಿಸಲಾಗಿದೆ.

ಲಾಮಾ ಕ್ಯಾಂಪ್ ನಂ 2 ರ ಲೋಸಲಿಂಗ್ ಬೌದ್ಧ ಮಂದಿರದ (ಲಾಮಾ) ಸನ್ಯಾಸಿ ಮಂದಿರಕ್ಕೆ ಕಬ್ಬಿಣದ ಏಣಿಯನ್ನು ತೆಗೆದಕೊಂಡು ಹೋಗುತ್ತಿರುವ ಸಂದರ್ಭ ಏಣಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. 
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News