'ಮೇಲ್ತೆನೆ' ಸಂಘಟನೆಯಿಂದ ಸಾಹಿತ್ಯ ಸಂವಾದ ಕೂಟ
Update: 2017-11-13 19:10 IST
ಮಂಗಳೂರು, ನ.13: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ ಱಮೇಲ್ತೆನೆೞ ಸಂಘಟನೆಯ ವತಿಯಿಂದ ಬ್ಯಾರಿ ಸಾಹಿತ್ಯ ಸಂವಾದ ಕೂಟವು ಮೇಲ್ತೆನೆಯ ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಅವರ ಮನೆಯಲ್ಲಿ ರವಿವಾರ ನಡೆಯಿತು.
ಱಮೇಲ್ತೆನೆೞಯ ಅಧ್ಯಕ್ಷ ಆಲಿಕುಂಞಿ ಪಾರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಕಲ್ಕಟ್ಟ ಮಂಡಿಸಿದ ಬ್ಯಾರಿ ಭಾಷೆಯ ಹಿನ್ನಡೆಗೆ ಬ್ಯಾರಿಗಳೇ ಕಾರಣರು ಎಂಬ ವಿಷಯದ ಮೇಲೆ ವಿಸ್ತೃತ ಚರ್ಚೆ ನಡೆಯಿತು.
ಕಾರ್ಯಕ್ರಮದಲ್ಲಿ ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಟಿ. ಇಸ್ಮಾಯೀಲ್, ಸದಸ್ಯರಾದ ಬಶೀರ್ ಅಹ್ಮದ್ ಕಿನ್ಯ, ನಿಯಾಝ್ ಪಿ., ರಫೀಕ್ ಪಾಣೇಲ, ಆರೀಫ್ ಕಲ್ಕಟ್ಟ, ಹಂಝ ಮಲಾರ್ ಉಪಸ್ಥಿತರಿದ್ದರು.