×
Ad

ರಾಜ್ಯಮಟ್ಟದ ಅಥ್ಲೆಟಿಕ್ಸ್‌: ಆಳ್ವಾಸ್‌ನ 34 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2017-11-13 19:51 IST

ಮೂಡುಬಿದಿರೆ, ನ. 13: ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಎಸ್‌ಎಂಎಸ್ ಪದವಿಪೂರ್ವ ಕಾಲೇಜು ಬ್ರಹ್ಮಾವರ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ 47 ಪದಕಗಳನ್ನು ಪಡೆದಿರುವ ಆಳ್ವಾಸ್‌ನ 34 ಮಂದಿ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇಡೀ ಕ್ರೀಡಾಕೂಟದಲ್ಲಿ ಒಟ್ಟು ಆರು ಕೂಟದಾಖಲೆಗಳಾಗಿದ್ದು, ಅದರಲ್ಲಿ ನಾಲ್ಕು ಕೂಟದಾಖಲೆಗಳನ್ನು ಆಳ್ವಾಸ್‌ನ ಕ್ರೀಡಾಪಟುಗಳೇ ಮಾಡಿರುವುದು ಗಮನಾರ್ಹ. ಹುಡುಗರ ಚಕ್ರ ಎಸೆತ ಹಾಗೂ ಹುಡುಗರ ಗುಂಡು ಎಸೆತ ಸ್ಪರ್ಧೆಯಲ್ಲಿ ಆಶಿಶ್ ಬಲೋಟಿಯ, ಹುಡುಗರ 5000 ಮೀ ಓಟದಲ್ಲಿ ಸಕ್ರಪ್ಪ ಹಾಗೂ ಹುಡುಗಿಯರ ಹೈಜಂಪ್‌ನಲ್ಲಿ ಸುಪ್ರಿಯಾ ನೂತನ ಕೂಟದಾಖಲೆ ಮಾಡಿರುವ ಆಳ್ವಾಸ್‌ನ ಕ್ರೀಡಾಪಟುಗಳು.

ಕ್ರೀಡಾಕೂಟದಲ್ಲಿ ದ.ಕ ಜಿಲ್ಲೆಯು ಒಟ್ಟು 57 ಪದಕಗಳನ್ನು ಜಯಿಸಿದ್ದು, ಅದರಲ್ಲಿ 47 ಪದಕ ಆಳ್ವಾಸ್ ಕ್ರೀಡಾಪಟುಗಳು ಗಳಿಸಿದ್ದಾರೆ. ಆಳ್ವಾಸ್ 20 ಚಿನ್ನದ ಪದಕ, 18 ಬೆಳ್ಳಿ ಪದಕ ಹಾಗೂ 9 ಕಂಚಿನ ಪದಕಗಳನ್ನು ಗಳಿಸಿದೆ. ಆಳ್ವಾಸ್‌ನ ಅಶಿಶ್ ಬಲೋಟಿಯ ಹಾಗೂ ಶಶಿಧರ್ ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದರು.

ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News