×
Ad

ಭಟ್ಕಳ ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳ ಯಶಸ್ವಿ ಫೆಸ್ಟ್

Update: 2017-11-13 19:53 IST

ಭಟ್ಕಳ, ನ. 13: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೊಲಜಿ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯ ಭಟ್ಕಳ ತಾಲೂಕಿನ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಫೆಸ್ಟ್ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮಿನಿ ಸ್ಟೆಮ್ ಫೆಷ್ಟ್-2017 (Mini STEM Fest-2017) ಎಂಬ ಶಿರ್ಷಿಕೆಯಡಿ ಆಯೋಜಿಸಿದ್ದ ಈ ಫೆಸ್ಟ್ ನಲ್ಲಿ ಉತ್ತರಕನ್ನಡ ಜಿಲ್ಲೆಯ ಪದವಿಪೂರ್ವ ಕಾಲೇಜುಗಳು ಸುಮಾರು 200ಕ್ಕೆ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾಡಲ್ ಎಕ್ಸ್ಪೋಮತ್ತು ಕ್ವಿಝೊಮಾನಿಯಾಎಂಬ ಎರಡು ಪ್ರಮುಖ ವಿಭಾಗಗಳಲ್ಲಿ ನಡೆದ ಈ ಫೆಸ್ಟ್ ನಲ್ಲಿ ಶಿರಸಿಯ ಎಂ.ಇ.ಎಸ್.ಚೈತನ್ಯ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳಾದ ಸಂಕೇತ್ ಹೆಗಡೆ ಮತ್ತು ಸೌರಭ್ ಹೆಗಡೆ ಕೃಷಿ ಮಾದರಿಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು. ಭಟ್ಕಳ ಕಾನ್ವೆಂಟ್ ಪಿ.ಯು ಕಾಲೇಜಿನ ಮುಹಮ್ಮದ್ ನೊಅಮಾನ್, ಆಖಿಫ್ ಅಝ್ಹರ್ ಖಾನ್ ಮತ್ತು ಶಿರೂನ್ ಡಕೋಸ್ತಾ ದ್ವಿತೀಯಾ ಬಹುಮಾನವನ್ನು ಪಡೆದುಕೊಂಡರು. ಅಂಜುಮನ್ ಪದವಿಪೂರ್ವ ಬಾಲಕೀಯರ ಕಾಲೇಜಿನ ಫಾತಿಮಾ ಝೋಹರಾ, ಅಜಿಬಾ ಸೈಯದ್ಯ್, ಆಯಿಶಾ ಅಮಿನಾ ತೃತೀಯ ಬಹುಮಾನ ಪಡೆದುಕೊಂಡರು.

ಕ್ವಿರ್ ಸ್ಪರ್ಧೆಯಲ್ಲಿ ಶಿರಸಿ ಎಮ್.ಇ.ಎಸ್.ಕಾಲೇಜಿನ ಸುಶಾಂತ್ ಹೆಗಡೆ, ಮಹೇಶ್ ಹೆಗಡೆ ಪ್ರಥಮ, ಶ್ರೀವತ್ಸಾ ಹಾಗೂ ಸಮಿಯುರ್ರಹ್ಮಾನ್ ದ್ವಿತೀಯಾ, ಹೊನ್ನಾವರ ಎಸ್.ಡಿ.ಎಂ. ಕಾಲೇಜಿನ ನಿಂಗೇಶ್ವರ ಹೆಗಡೆ ಮತ್ತು ಎಂ.ಬಿ.ರಾಘವ್ ತೃತಿಯಾ ಬಹುಮಾನ ಪಡೆದುಕೊಂಡರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜುಕಾಕೋ ಅಬ್ದುಲ್ ರಹೀಮ್, ಅಡಿಷ್ನಲ್ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್ ಶಾಬಂದ್ರಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲ, ಉಪನ್ಯಾಸಕ ವರ್ಗದವರು ಉಪಸ್ಥಿತಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News