×
Ad

ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ: ಬೆಂಗಳೂರು ಉತ್ತರ ದ್ವಿತೀಯ

Update: 2017-11-13 21:31 IST

ಬ್ರಹ್ಮಾವರ, ನ.13: ಬ್ರಹ್ಮಾವರ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದು, ಬೆಂಗಳೂರು ಉತ್ತರ ದ್ವಿತಿೀಯ ಸ್ಥಾನವನ್ನು ಪಡೆದುಕೊಂಡಿದೆ.

800 ಮೀ.ನಲ್ಲಿ ದ್ವಿತೀಯ, 1500ರಲ್ಲಿ ಮತ್ತು 3000ದಲ್ಲಿ ಪ್ರಥಮ ಸ್ಥಾನ ಪಡೆದು 13ಅಂಕ ಪಡೆದುಕೊಂಡಿರುವ ಉಷಾ ಆರ್.(ಬೆಂಗಳೂರು ಉತ್ತರ) ಬಾಲಕಿಯರ ವಿಭಾಗದಲ್ಲಿ ಮತ್ತು ಶಾಟ್‌ಪುಟ್, ಡಿಸ್ಕಸ್ ಥ್ರೊನಲ್ಲಿ ಪ್ರಥಮ ಸ್ಥಾನ ಗಳಿಸಿದ ಆಶಿಷ್ ಬಾಲೋಥಿಯಾ(ದ.ಕ) ಮತ್ತು 800ಮೀ. ಮತ್ತು 1500 ಮೀ.ನಲ್ಲಿ ಪ್ರಥಮ ಸ್ಥಾನ ಪಡೆದ ಶಶಿಧರ್ ಬಿ.ಎಲ್.(ದ.ಕ) ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ಗಳಾಗಿ ಮೂಡಿಬಂದಿದ್ದಾರೆ.

ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೂತನ ದಾಖಲೆ ಮಾಡಿರುವುದು ವಿಶೇಷವಾಗಿತ್ತು. ಇಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾ ಯಿತು.

ಕ್ರೀಡಾಕೂಟದ ಫಲಿತಾಂಶ:  ಕ್ರೀಡಾಕೂಟದ ಮೂರನೆ ದಿನವೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಮುನ್ನಡೆ ಸಾಧಿಸಿದರು. ಬಾಲಕರ ವಿಭಾಗದ 5ಕಿ.ಮೀ ಕ್ರಾಸ್ ಕಂಟ್ರಿ ಓಟ: ಪ್ರ-ಅಸ್ಲಾಮ್ ಮುಲ್ತಾನಿ (ಚಿಕ್ಕೋಡಿ), ದ್ವಿ- ಮುತ್ತಪ್ಪ ದೊಡ್ಡಪ್ಪ(ಬಾಗಲಕೋಟೆ), ತೃ-ಮಿಲನ್ ಎಂ.ಸಿ, ಬಾಲಕಿಯರ ವಿಭಾಗ: ಪ್ರ- ಪ್ರಿಯಾ ಎಲ್.ಡಿ(ದ.ಕ), ದ್ವಿ-ಹರ್ಷಿತಾ (ಬೆಂಗಳೂರು ಉತ್ತರ), ತೃ-ಮಲ್ಲೇಶ್ವರಿ ರಾಥೋಡ್(ಬೆಂಗಳೂರು ಉತ್ತರ).

ಟ್ರಿಪಲ್ ಜಂಪ್ ಬಾಲಕಿಯರ ವಿಭಾಗ: ಪ್ರ- ಅನಿತಾ ವಿ.ಎಸ್.(ದ.ಕ), ದ್ವಿ- ಕೆ.ಎಂ.ದೀಪಾಶಿ ಸಿಂಗ್(ಬೆಂಗಳೂರು ದಕ್ಷಿಣ), ತೃ- ಬಿ.ಎನ್.ತುಂಗಶ್ರೀ (ದ.ಕ)-3, ಡಿಸ್ಕಸ್ ಥ್ರೋ ಬಾಲಕರ ವಿಭಾಗ: ಪ್ರ-ಆಶಿಬಾಕಶ್ ಭಾಲೋ ಥಿಯಾ(ದ.ಕ), ದ್ವಿ-ಮಹಮ್ಮದ್ ಸಾಕಾಲಿನ್(ಮೈಸೂರು), ತೃ- ಸಂಜೀವ ಬಿ.ಕೊಳವಿ(ಬೆಂಗಳೂರು ದಕ್ಷಿಣ). 1500 ಓಟ ಬಾಲಕಿಯರ ವಿಭಾಗ: ಪ್ರ-ಉಶಾ ಆರ್.(ಬೆಂಗಳೂರು ಉತ್ತರ), ದ್ವಿ- ಪ್ರಿಯಾ ಎಲ್.ಡಿ(ದ.ಕ), ತೃ-ಪಲ್ಲವಿ ಜಿ ಅಪ್ಪಿನಬಾಳ್ (ಮೈಸೂರು),

ಬಾಲಕರ ವಿಭಾಗ: ಪ್ರ-ಶಶಿಧರ್ ಬಿ.ಎಲ್.(ದ.ಕ), ದ್ವಿ- ಲಕ್ಷ್ಮಣ(ಬೆಂಗಳೂರು ದಕ್ಷಿಣ), ತೃ-ಎಚ್.ಎಂ.ಸಕ್ರಪ್ಪ(ದ.ಕ). ಎತ್ತರ ಜಿಗಿತ ಬಾಲಕಿಯರ ವಿಭಾಗ: ಪ್ರ-ವೀಕ್ಷಾ(ದ.ಕ), ದ್ವಿ-ಕರಿಷ್ಮಾ ಸನಿಲ್(ಉಡುಪಿ), ತೃ-ದರ್ಷಿಣಿ(ದ.ಕ). ಟ್ರಿಪಲ್ ಜಂಪ್ ಬಾಲಕರ ವಿಭಾಗ: ಪ್ರ-ನವೀನ್ ಬಿ(ಬೆಂ.ಉ), ದ್ವಿ-ಪ್ರಮೋದ ಅಂಬಿಗ(ಉ.ಕ), ತೃ- ಕೆಂಗೆತ್ ಅಂತೋನಿ (ಬೆಂ.ಉ).

200ಮೀ. ಬಾಲಕರ ವಿಭಾಗ: ಪ್ರ-ವರುಣ್ ಅಡಿಗ(ಉಡುಪಿ), ದ್ವಿ- ಅಭಿನ್ ದೇವಾಡಿಗ(ಉಡುಪಿ), ತೃ-ನವನೀತ್(ದ.ಕ). ಬಾಲಕಿಯರ ವಿಭಾಗ: ಪ್ರ-ಧನೇಶ್ವರಿ ಅಶೋಕ್(ಬೆಂ.ಉ), ದ್ವಿ-ಜೋಸ್ನಾ(ದ.ಕ), ತೃ-ಹರ್ಷಿಣಿ(ಮೈಸೂರು), 400ಮೀ. ರಿಲೇ ಬಾಲಕರ ವಿಭಾಗ: ಪ್ರ-ದ.ಕ., ದ್ವಿ- ಉಡುಪಿ, ತೃ-ಬೆಂ.ದ. ಬಾಲಕಿಯರ ವಿಭಾಗ: ಪ್ರ-ಬೆಂ.ಉ., ದ್ವಿ- ದ.ಕ., ತೃ-ಮೈಸೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News