×
Ad

​ನ.15ರಿಂದ ಹಜ್ ಸಮಿತಿಯಿಂದ ಅರ್ಜಿ ಫಾರಂ ಬಿಡುಗಡೆ

Update: 2017-11-13 21:35 IST

ಮಂಗಳೂರು, ನ. 13: ಪವಿತ್ರ ಹಜ್ ಯಾತ್ರೆ ಕೈಗೊಳ್ಳುವವರಿಗೆ ಕೇಂದ್ರ ಹಜ್ ಸಮಿತಿಯು ನ.15ರಿಂದ ಹಜ್ ಯಾತ್ರೆಯ ಅರ್ಜಿ ಫಾರಂಗಳನ್ನು ಬಿಡುಗಡೆಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಹಜ್ ಸಮಿತಿಯಿಂದ ‘ಹಜ್-2018’ಯಾತ್ರೆ ಕೈಗೊಳ್ಳುವ ಆಕಾಂಕ್ಷಿಗಳು ಬೆಂಗಳೂರಿನಲ್ಲಿರುವ ರಾಜ್ಯ ಹಜ್ ಸಮಿತಿ ಕಚೇರಿಯಿಂದ ಯಾವುದೇ ಶುಲ್ಕ ಪಾವತಿಸದೆ ಹಜ್ ಫಾರಂಗಳನ್ನು ಪಡೆದುಕೊಳ್ಳಬಹುದು. ಅಥವಾ ಹಜ್ ಕಮಿಟಿ ಆಫ್ ಇಂಡಿಯಾದ ವೆಬ್‌ಸೈಟ್ www.hajcommittee.gov.in   ನಿಂದ ಅರ್ಜಿಫಾಂನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಭರ್ತಿ ಮಾಡಿರುವ ಅರ್ಜಿ ಫಾರಂಗಳನ್ನು ನ.15ರಿಂದ ಡಿ.7ರವರೆಗೆ ಕಚೇರಿ ಸಮಯ ಬೆಳಗ್ಗೆ 10ರಿಂದ ಮಧ್ಯಾಹ್ನ 3:30ರವರೆಗೆ ಸಲ್ಲಿಸಲು ಅವಕಾಶ ಇದೆ. ಅಥವಾ ಭರ್ತಿ ಮಾಡಿದ ಅರ್ಜಿಗಳನ್ನು www.hajcommittee.gov.in  ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದು. ಅರ್ಜಿ ಫಾರಂಗಳನ್ನು ಭರ್ತಿ ಮಾಡುವ ಮುನ್ನ ಮಾರ್ಗದರ್ಶಿ ಸಲಹೆಗಳನ್ನು ಸರಿಯಾಗಿ ಓದಿದ ನಂತರವೇ ಸಲ್ಲಿಸುವಂತೆ ರಾಜ್ಯ ಹಜ್ ಸಮಿತಿಯ ಪ್ರಕಟನೆ ತಿಳಿಸಿದೆ.

‘ಹಜ್-2018’ ಆಕಾಂಕ್ಷಿಗಳು 2017ರ ನವೆಂಬರ್ 7 ಅಥವಾ ಅದರ ಮುಂಚಿನ ದಿನಾಂಕದಿಂದ 2019ರ ಫೆ.14ರವರೆಗೆ ದಿನಾಂಕವರೆಗಿನ ಪಾಸ್‌ಪೋರ್ಟ್‌ಗಳನ್ನು ಹೊಂದಿರಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News