ನ.14ರಂದು ಮಕ್ಕಳಿಗಾಗಿ ಸ್ಪರ್ಧೆ, ಉಪನ್ಯಾಸ
Update: 2017-11-13 22:12 IST
ಉಡುಪಿ, ನ.13: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಆಸ್ಪತ್ರೆಯ ಬಾಲರೋಗ ವಿಭಾಗ ಮತ್ತು ಬೆಂಗಳೂರು ಹಿಮಾಲಯ ಡ್ರಗ್ಸ್ ಕಂಪನಿಯ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನ.14ರಂದು ಮಧ್ಯಾಹ್ನ 2 ಗಂಟೆಗೆ ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ತೊಂದರೆಗಳಿಗೆ ಮನೆಮದ್ದು ಎಂಬ ಉಪನ್ಯಾಸವನ್ನು ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳ ಲಾಗಿದೆ.
ಎಸ್‌ಡಿಎಂ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಭಾಗ ಮುಖ್ಯಸ್ಥ ಡಾ. ಶ್ರೀಕಾಂತ್ ಪಿ. ಉಪನ್ಯಾಸ ನೀಡಲಿರುವರು. ಈ ಸಂದರ್ಭದಲ್ಲಿ ಆರೋಗ್ಯ ವಂತ ಶಿಶು ಮತ್ತು ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಆಟಿಕೆಗಳನ್ನು ನೀಡಲಾಗುವುದು. ಶಿಶು ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಚುಚ್ಚುಮದ್ದಿನ ಹಾಗೂ ಎಸ್‌ಡಿಎಂ ಸ್ವರ್ಣಪ್ರಾಶನ ಕಾರ್ಡನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9483983839, 9448745477ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.