ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆ: ಎಸಿಪಿ ಡಿಸೋಜ ಅವರಿಗೆ ‘ಬೆಸ್ಟ್ ಪೋಸರ್’ ಪ್ರಶಸ್ತಿ
Update: 2017-11-13 22:14 IST
ಮಂಗಳೂರು, ಇ. 13: ಅಮೆರಿಕಾದ ಲಾಸ್ ವೇಗಸ್‌ನಲ್ಲಿ ನ.9ರಿಂದ ನ.12ರವರೆಗೆ ನಡೆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ನಗರದ ಸಿಸಿಬಿ ವಿಭಾಗದ ಎಸಿಪಿ ವೆಲೈಂಟೈನ್ ಡಿಸೋಜ ಅವರಿಗೆ ‘ಬೆಸ್ಟ್ ಪೋಸರ್’ ಪ್ರಶಸ್ತಿ ಲಭಿಸಿದೆ.ಇಂಟರ್‌ನ್ಯಾಷನಲ್ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ (ಐಎನ್‌ಬಿಎ) ಈ ಸ್ಪರ್ಧೆಯನ್ನು ಏರ್ಪಡಿಸಿತ್ತು.
ವೆಲೆಂಟೈನಂ ಡಿಸೋಜ ಅವರು 2016ರಲ್ಲಿ ಫಿಲಿೈನ್ಸ್‌ನ ಸಿಬು ನಗರದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಅದ್ಭುತ ಪ್ರದರ್ಶನ ನೀಡಿ ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸಿದ್ದರು.