‘ಗುಲ್ಶನ್’ ಮಕ್ಕಳಿಗಾಗಿ ತೋಟಗಾರಿಕಾ ಉತ್ಸವ
ಉಡುಪಿ, ನ.13: ಐದರಿಂದ 12ವರ್ಷ ವಯಸ್ಸಿನ ಮಕ್ಕಳ ಸಂಘಟನೆಯಾಗಿ ರುವ ‘ಗುಲ್ಶನ್’ ವತಿಯಿಂದ ಮಕ್ಕಳಿಗಾಗಿ ತೋಟಗಾರಿಕಾ ಅಭಿಯಾನವನ್ನು ಇತ್ತೀಚೆೆ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದ ಪ್ರಯುಕ್ತ ಮರಗಳ ಸರ್ವೆ, ಪರಿಸರದಲ್ಲಿರುವ ಗಿಡಮರಗಳ ಪರಿಚಯ, ಎಲೆಗಳ ಕ್ರಾಫ್ಟ್, ಅದರ ಪ್ರಮುಖ ಗುಣಗಳು, ಪ್ರಾಮುಖ್ಯತೆಗಳು, ಅತ್ಯಂತ ಹಳೆಯ ಮರದೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸ್ಪರ್ಧೆ, ಡ್ರಾಯಿಂಗ್, ಮಿನಿ ಗಾರ್ಡನ್ ಹೀಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಉಡುಪಿ ಜಾಮಿಯಾ ಮಸೀದಿಯ ಸಭಾಂಗಣದಲ್ಲಿ ನಡೆದ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ವಲಯದ ಉಪಅರಣ್ಯಾಧಿಕಾರಿ ಜೀವನ ಶೆಟ್ಟಿ ಅರಣ್ಯ ಸಂಪತ್ತು, ನೀರು, ಮರಗಿಡಗಳ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಮಣಿಪಾಲ ವಿವಿಯ ಅಸೋಸಿಯೇಟ್ ಪ್ರೊ.ಡಾ.ಅಬ್ದುಲ್ ಅಝೀಝ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾ ವರ ಉಪಸ್ಥಿತರಿದ್ದರು. ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುವಾನವಾಗಿ ಗಿಡಗಳನ್ನು ನೀಡಲಾಯಿತು.
ಶಾಹಿದಾ ರಿಯಾಝ್ ಸ್ವಾಗತಿಸಿದರು. ಅಭಿಯಾನದ ಸಂಚಾಲಕಿ ಮೆಹರ ನ್ನಿಸಾ ಪ್ರಸ್ತಾವಿಕವಾಗಿ ಮಾತನಾಡಿದರು. ಸುರಯ್ಯಾ ವಂದಿಸಿದರು. ಇದರಲ್ಲಿ ಉಡುಪಿ ಆಸುಪಾಸಿನ ಸುಮಾರು 70ಕ್ಕಿಂತಲೂ ಅಧಿಕ ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.